ಕೊಕ್ಕಡ: ಕಾಷ್ಠ ಶಿಲ್ಪಿ ಕೊರಗಪ್ಪ ಆಚಾರ್ಯ ನಿಧನ

ಕೊಕ್ಕಡ: ಕಾಷ್ಠ ಶಿಲ್ಪಿ ಕೊರಗಪ್ಪ ಆಚಾರ್ಯ ನಿಧನ

ನೇಸರ ಜು.07: ಕೊಕ್ಕಡ ಗ್ರಾಮದ ಆಲಡ್ಕ ಮನೆ ನಿವಾಸಿ ಕೊರಗಪ್ಪ ಆಚಾರ್ಯ(78) ಅಲ್ಪ ಕಾಲದ ಅಸೌಖ್ಯದಿಂದ ಜುಲೈ 7 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಕಾಷ್ಠ ಶಿಲ್ಪಿಯಾಗಿದ್ದ ಇವರು ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ, ಶಿಶಿಲ ಗಣಪತಿ ದೇವಸ್ಥಾನ, ಪಟ್ರಮೆ ವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ಸದಾಶಿವೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ಹಲವು ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ರಥ, ಪಲ್ಲಕ್ಕಿ, ಸುತ್ತುಪೌಳಿ, ದೈವದ ಮಣೆ ಮಂಚಗಳ ಕೆತ್ತನೆಯನ್ನು ಅಚ್ಚುಕಟ್ಟಾಗಿ ಮಾಡಿ ಪ್ರಸಿದ್ಧಿಯಾಗಿದ್ದರು.
ಹಲವು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.
ಮೃತರು ಪತ್ನಿ ಗುಣವತಿ, 4 ಗಂಡು ಹಾಗೂ 5 ಹೆಣ್ಣು , 6 ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!