ಬೆಳ್ತಂಗಡಿ ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ ದಿಡುಪೆ ಭಾಗಕ್ಕೆ ಭೇಟಿ

ಬೆಳ್ತಂಗಡಿ ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ ದಿಡುಪೆ ಭಾಗಕ್ಕೆ ಭೇಟಿ

ನೇಸರ ಜು.10: ಬೆಳ್ತಂಗಡಿ ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರು ಮಿತ್ತಬಾಗಿಲು, ಗಣೇಶ್ ನಗರ, ಮಲವಂತಿಗೆ ಗ್ರಾಮದ ಅಂಗನವಾಡಿ,ಸರಕಾರಿ ಪ್ರೌಢ ಶಾಲೆ ಕಜಕ್ಕೆ ದಿಡುಪೆ ಭಾಗಕ್ಕೆ ಶನಿವಾರ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ನದಿ ತೀರದ ಪಕ್ಕದ ಮನೆ ಮನೆಗೆ ಭೇಟಿ ನೀಡಿ ತೊಂದರೆಗೊಳಗಾಗುವ ಪ್ರದೇಶದ ಜನರಿಗೆ ಜಾಗೃತಿ ಮೂಡಿಸಿದರು ಮತ್ತು ಗುಡ್ಡ ಭಾಗದ ಮನೆಗಳಿಗೆ ಭೇಟಿ ನೀಡಿ ದೈರ್ಯ ತುಂಬಿ, ಅಗತ್ಯ ಸಂದರ್ಭ ಗ್ರಾಮದಲ್ಲಿಯೇ ಕಾಳಜಿ ಕೇಂದ್ರ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದರು .ಆರ್.ಐ. ಪ್ರದೀಶ್ ಕುಮಾರ್, ನೆಹರು ಯುವ ಕೇಂದ್ರ ಮಂಗಳೂರು ಇದರ ತಾಲೂಕು ಸಂಯೋಜಕ ತೀಕ್ಷಿತ್ ಕೆ.ದಿಡುಪೆ ಇದ್ದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!