ಕಾಶಿಬೆಟ್ಟು ಎಂಬಲ್ಲಿ ಮೋರಿ ಸಹಿತ ರಸ್ತೆ ಕುಸಿತ ➽ ಮುಂಜಾಗರೂಕತೆಗಾಗಿ ಬ್ಯಾರಿಕೇಡ್ ಅಳವಡಿಕೆ

ಕಾಶಿಬೆಟ್ಟು ಎಂಬಲ್ಲಿ ಮೋರಿ ಸಹಿತ ರಸ್ತೆ ಕುಸಿತ ➽ ಮುಂಜಾಗರೂಕತೆಗಾಗಿ ಬ್ಯಾರಿಕೇಡ್ ಅಳವಡಿಕೆ

ನೇಸರ ಜು.13: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಾಶಿಬೆಟ್ಟು ಎಂಬಲ್ಲಿ ಮೋರಿ ಸಹಿತ ರಸ್ತೆ ಕುಸಿತಗೊಂಡಿದೆ .ಈಗಾಗಲೇ ಭಾರೀ ಮಳೆ ಸುರಿಯುತ್ತಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿದೆ.

ಈ ರಸ್ತೆಯಲ್ಲಿ ಧರ್ಮಸ್ಥಳ ಚಿಕ್ಕಮಗಳೂರು ಸೇರಿದಂತೆ ಭಾರೀ ವಾಹನಗಳ ಸಂಚಾರ ಇರುವುದಲ್ಲದೇ ಘನ ವಾಹನಗಳ ಸಂಚಾರವೂ ಅಧಿಕವಾಗಿದೆ.

ಮಾಹಿತಿ ತಿಳಿದ ತಕ್ಷಣ ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಸಲ್ದಾನ, ಉಪಾಧ್ಯಕ್ಷ ಗಣೇಶ್ ಆರ್, ಸದಸ್ಯರುಗಳಾದ ಪ್ರಸಾದ್ ಶೆಟ್ಟಿ ಎಣಿಂಜೆ, ದಿನೇಶ್ ಶೆಟ್ಟಿ, ಹರಿಕೃಷ್ಣ, ಅರವಿಂದ ಕುಮಾರ್, ಕಾರ್ಯದರ್ಶಿ ಯಶೋದರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ  ಮುಂಜಾಗರೂಕತೆಗಾಗಿ ಬ್ಯಾರಿಕೇಡ್ ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.
ಅದೇ ರೀತಿ ಸಂಬಂಧಪಟ್ಟ ಇಲಾಖೆಯು ಈ ಬಗ್ಗೆ ತಕ್ಷಣ ಕ್ರಮ ವಹಿಸ ಬೇಕಾಗಿದೆ. ಇಲ್ಲದಿದ್ದಲ್ಲಿ ದೊಡ್ಡ ಅನಾಹುತ ಸಂಭವಿಸುವ ಅಪಾಯವಿದೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!