ಎರ್ನೋಡಿ ಸೇತುವೆ ಬಳಿ ಕಾರು ಹಾಗೂ ಬೈಕ್ ಡಿಕ್ಕಿ ➤ ಗಾಯಗೊಂಡ ಬೈಕ್ ಸವಾರ

ಎರ್ನೋಡಿ ಸೇತುವೆ ಬಳಿ ಕಾರು ಹಾಗೂ ಬೈಕ್ ಡಿಕ್ಕಿ ➤ ಗಾಯಗೊಂಡ ಬೈಕ್ ಸವಾರ

ನೇಸರ ಜು.15: ಉಜಿರೆ ಇಲ್ಲಿನ ಎರ್ನೋಡಿ ಸೇತುವೆ ಬಳಿ ಕಾರು ಹಾಗೂ ಬೈಕ್ ಡಿಕ್ಕಿ ಹೊಡೆದಿರುವ ಘಟನೆ ಜು.15 ರಂದು ನಡೆದಿದೆ.
ಬೆಳ್ತಂಗಡಿಯಿಂದ ಉಜಿರೆಗೆ ಬೈಕ್ ಸವಾರ ಹೋಗುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ತಾಗಿ ಬೈಕ್ ಸವಾರ ನೆಲಕ್ಕುರುಳಿದ್ದಾನೆ. ಅದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಕಾರು ಬೈಕ್ ಸವಾರನ ಕಾಲಿನ ಮೇಲೆ ಚಲಿಸಿದೆ. ಇದರಿಂದ ಗಾಯಗೊಂಡ ಬೈಕ್ ಸವಾರನನ್ನು ಅಲ್ಲೇ ಇದ್ದ ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡ ಬೈಕ್ ಸವಾರ ಪಟ್ರಮೆಯ ನಿವಾಸಿ ಅಜಿತ್ ಎಂದು ತಿಳಿದು ಬಂದಿದೆ.

Leave a Reply

You May Have Missed

error: Content is protected !!