ಶಿರಾಡಿ ಘಾಟಿ ಭಾಗದಲ್ಲಿ ಬಿದ್ದ ಬೃಹದಾದ ಮರ ➤ ಕೆಲ ಕಾಲ ವಾಹನ ಸಂಚಾರಕ್ಕೆ ನಿಷೇಧ

ಶಿರಾಡಿ ಘಾಟಿ ಭಾಗದಲ್ಲಿ ಬಿದ್ದ ಬೃಹದಾದ ಮರ ➤ ಕೆಲ ಕಾಲ ವಾಹನ ಸಂಚಾರಕ್ಕೆ ನಿಷೇಧ

ನೇಸರ ಜು.15: ಶಿರಾಡಿ ಘಾಟಿ ಭಾಗದಲ್ಲಿ ಬೃಹದಾದ ಮರ ಒಂದು ಬಿದ್ದಿದ್ದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಶಿರಾಡಿ ಘಾಟಿಯಲ್ಲಿ ಸಂಚರಿಸುವ ವಾಹನಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಜು.15ರ ಮಧ್ಯಾಹ್ನ ಕೆಲ ಸಮಯಗಳ ಕಾಲ ಬ್ಯಾರಿಕೇಡ್ ಹಾಕಿ ಸಂಪೂರ್ಣ ವಾಹನ ಸಂಚಾರಕ್ಕೆ ನಿಷೇಧ ಮಾಡಲಾಗಿತ್ತು.

ಆದರೆ ಕೆಲವೇ ನಿಮಿಷಗಳಲ್ಲಿ ಈ ಬ್ಯಾರಿಕೇಡ್ ತೆರವುಗೊಳಿಸಿ ಮತ್ತೆ ಸಂಚಾರಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿತು.
ಸಂಜೆಯು ಇದೇ ರೀತಿ ಮೂರ್ನಾಲ್ಕು ಮರಗಳು ಬಿದ್ದ ಪರಿಣಾಮ ಮರಗಳು ತೆರವುಗೊಳ್ಳುವ ತನಕ ಮತ್ತೆ ಸಂಚಾರ ಸ್ಥಗಿತಗೊಳಿಸ ಲಾಯಿತು.
ಶಿರಡಿ ಘಾಟಿಯಲ್ಲಿ ಲಘು ವಾಹನ ಹಾಗೂ ಬಸ್ಸು ಸಂಚಾರ ಎಂದಿನಂತೆ ಮುಂದುವರೆಯುತ್ತಿದ್ದು,
ಘನವಾಹನಗಳಿಗೆ ಬೆಳಗ್ಗೆ 6 ರಿಂದ ಸಂಜೆ 6 ತನಕ ಮಾತ್ರ ಸಂಚಾರಕ್ಕೆ ಜಿಲ್ಲಾಡಳಿತದಿಂದ ಅವಕಾಶ ನೀಡಲಾಗಿದೆ.

Leave a Reply

You May Have Missed

error: Content is protected !!