ಯುವತಿ ನಾಪತ್ತೆ; ತಾಯಿಯಿಂದ ಠಾಣೆಗೆ ದೂರು

ಯುವತಿ ನಾಪತ್ತೆ; ತಾಯಿಯಿಂದ ಠಾಣೆಗೆ ದೂರು

ನೇಸರ ಜು.17: ಯುವಕನೋರ್ವ ತನ್ನ ಮಗಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದು, ಆಕೆ ಇನ್ನೂ ಮನೆಗೆ ಹಿಂದಿರುಗಿಲ್ಲ ಎಂದು ಯುವತಿಯ ತಾಯಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಚಂದ್ರಾವತಿ ಎಂಬವರ ಪುತ್ರಿ ಪೂರ್ಣಿಮಾ(20) ನಾಪತ್ತೆಯಾಗಿರುವ ಯುವತಿ. ಪೂರ್ಣಿಮಾ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಸುಬ್ರಹ್ಮಣ್ಯದ ದೇವರಗದ್ದೆ ನಿವಾಸಿ ಪ್ರದೀಪ ಎಂಬಾತನನ್ನು ಕೆಲ ದಿನಗಳಿಂದ ಪ್ರೇಮಿಸುತ್ತಿದ್ದು, ಜು.12ರಂದು ರಾತ್ರಿ ಪ್ರದೀಪ ತನ್ನ ಮನೆಗೆ ಬಂದು ತನ್ನ ಮಗಳು ಪೂರ್ಣಿಮಾಳನ್ನು ಪುಸಲಾಯಿಸಿ ಆತನೊಂದಿಗೆ ಕರೆದುಕೊಂಡು ಹೋಗಿದ್ದು, ಆಕೆ ಇದುವರೆಗೂ ಹಿಂತಿರುಗಿ ಬಂದಿರುವುದಿಲ್ಲ. ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ನನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ತಾಯಿ ಸುಬ್ರಹ್ಮಣ್ಯ ಠಾಣೆಗೆ ಜು.16ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous post

ನೆಲ್ಯಾಡಿಯ ಉದ್ಯಮಿ ಎಲೈಟ್ ರಬ್ಬರ್ ಇಂಡಸ್ಟ್ರೀಸ್ ಹಾಗೂ ಎಲೈಟ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಯು.ಪಿ ವರ್ಗೀಸ್ ರಿಗೆ ನುಡಿ ನಮನ

Next post

ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆ

Leave a Reply

You May Have Missed

error: Content is protected !!