ಅಕ್ರಮ ಮರ ಕಡಿದ ಪ್ರಕರಣ : ನಾಲ್ವರ ಬಂಧನ

ಅಕ್ರಮ ಮರ ಕಡಿದ ಪ್ರಕರಣ : ನಾಲ್ವರ ಬಂಧನ

ನೇಸರ ಜು18:ಶಿಬಾಜೆ ರಕ್ಷಿತಾರಣ್ಯದ ಕಜೆ ಎಂಬಲ್ಲಿ ಅಕ್ರಮ ಮತ್ತಿ (ಬಣ್ಪು) ಮತ್ತು ಹೆಬ್ಬಲಸು ಮರ ಕಡಿತಲೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿಬಾಜೆ ಗ್ರಾಮದ ಕಜೆ ನಿವಾಸಿ ದಿನೇಶ್ (51) ಹಾಗೂ ಕಳೆಂಜ ಗ್ರಾಮದ ಕಾಯಡ ನಿವಾಸಿ ಜಿತೇಂದ್ರ (25)‌ಭಾನುವಾರ ಬಂಧಿಸಿ, ತಲೆ ಮರೆಸಿಕೊಂಡಿದ್ದ ಶಿಬಾಜೆಯ ಉಮೇಶ್ (35), ರೆಖ್ಯದ ವಿಜಯ್‌ (45)ನನ್ನು ಸೋಮವಾರ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯರಣ್ಯಾಧಿಕಾರಿ ಸಂತೋಷ್ ತಡ್ಲಗಿ ಹಾಗೂ ಅರಣ್ಯ ರಕ್ಷಕ ನಿಂಗಪ್ಪ ಅವಾರಿ, ಪ್ರಶಾಂತ್ ಮಾಳಗಿ, ರಸೂಲ್, ಸುನಿಲ್ ನಾಯಕ್, ಅರಣ್ಯ ವೀಕ್ಷಕ ದಾಮೋದರ್ ಬಾಗಿಯಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಉಪ್ಪಿನಂಗಡಿ ವಲಯಾರಣ್ಯಾದಿಕಾರಿ ಎದುರು ಹಾಜರುಪಡಿಸಲಾಗಿದ್ದು, ಸ್ಥಳದ ಮಹಜರು ನಡೆಸಿ ವಲಯಾರಣ್ಯಾಧಿಕಾರಿ ಮಧುಸೂದನ್ ಮತ್ತು ಸಿಬ್ಬಂದಿ ವರ್ಗ ಕಡಿತಲೆಗೆ ಸಂಬಂಧಿಸಿದ ಅಡಗಿಸಿದ ಎಲ್ಲಾ ಸೊತ್ತುಗಳನ್ನು ಅಮಾನತು ಪಡಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!