ನೂಜಿಬಾಳ್ತಿಲ: ಆನೆ ದಾಳಿ ಅಡಿಕೆ ಕೃಷಿ ಹಾಗೂ ಜೇನು ಕೃಷಿ, ದ್ವಿಚಕ್ರವಾಹನಕ್ಕೆ ಹಾನಿ

ನೂಜಿಬಾಳ್ತಿಲ: ಆನೆ ದಾಳಿ ಅಡಿಕೆ ಕೃಷಿ ಹಾಗೂ ಜೇನು ಕೃಷಿ, ದ್ವಿಚಕ್ರವಾಹನಕ್ಕೆ ಹಾನಿ

ನೇಸರ ಜು29: ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ವ್ಯಾಪ್ತಿ ನಿರಂತರವಾಗಿ ಕೃಷಿಗಳಿಗೆ ಆನೆ ದಾಳಿ ನಡೆಸುತ್ತಿದ್ದು. ಇದೀಗ ನಿನ್ನೆ (ಜು.28) ರಾತ್ರಿ ಸುಮಾರು 8 ಗಂಟೆಯ ಸಮಯ ಮರಿ ಆನೆಯೊಂದಿಗೆ 3 ಆನೆಗಳು ದಾಳಿ ನಡೆಸಿವೆ.

ಆನೆ ದಾಳಿಯಲ್ಲಿ ಬಲ್ಲೇರಿ ಸುಂದರ ಗೌಡ ಎಂಬವರ ಸುಮಾರು 25ಕ್ಕೂ ಹೆಚ್ಚಿನ ಅಡಿಕೆ ಕೃಷಿಯನ್ನು ಧ್ವಂಸಗೊಳಿಸಿವೆ. ಸಮೀಪದ ಜಯಪ್ರಕಾಶ್ ಪೆತ್ತಲ ಎಂಬವರ ತೋಟದಲ್ಲಿ ಇರಿಸಲಾದ 14 ಜೇನುಪೆಟ್ಟಿಗೆಗಳನ್ನು, ಕಿಶೋರ್ ಪಾದೆ ಎಂಬವರ ದ್ವಿಚಕ್ರ ವಾಹನವನ್ನು ಹಾನಿಗೊಳಿಸಿ, ಕೃಷಿಕರಿಗೆ ಅಪಾರ ನಷ್ಟವನ್ನು ಉಂಟು ಮಾಡಿದೆ.
ಈ ಪರಿಸರದ ಕೃಷಿಕರು ಪದೇಪದೇ ಆನೆ ದಾಳಿಗೆ ಒಳಗಾಗಿ ಸಂಕಟಗೊಂಡಿದ್ದಾರೆ. ಅರಣ್ಯ ಇಲಾಖೆ ಈಬಗ್ಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸುತ್ತಾ ಬಂದಿದ್ದಾರೆ.
ಘಟನಾ ಸ್ಥಳಕ್ಕೆ ಉಪ ವಲಯಾರಣ್ಯಾಧಿಕಾರಿ, ಅರಣ್ಯ ರಕ್ಷಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

You May Have Missed

error: Content is protected !!