ಸುದ್ದಿವಾಹಿನಿಯ ‘ಲೋಗೋ ‘ ಅನಾವರಣ

ಸುದ್ದಿವಾಹಿನಿಯ ‘ಲೋಗೋ ‘ ಅನಾವರಣ

ನೂತನ ಸುದ್ದಿವಾಹಿನಿ ನೇಸರ ಲೋಕಾರ್ಪಣೆ

ಗ್ರಾಮೀಣ ಭಾಗದ ನೈಜ ಸುದ್ದಿಗಳ ನೇರ ಬಿತ್ತರದ ಸದುದ್ದೇಶದಿಂದ ಆರಂಭಗೊಳ್ಳಲಿರುವ
“ನೇಸರ ನ್ಯೂಸ್ ವರ್ಲ್ಡ್ ” ಸುದ್ದಿವಾಹಿನಿಯ ‘ಲೋಗೋ ‘ ಲೋಕಾರ್ಪಣೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ -ಕೌಕ್ರಾಡಿ ಶ್ರೀ ದೇವರ ಸನ್ನಿಧಾನದಲ್ಲಿ ನಡೆಯಿತು .ಕ್ಷೇತ್ರದ ಪ್ರದಾನ ಅರ್ಚಕರಾದ ಶ್ರೀ ಸುರೇಶ ಮುಚ್ಚಿoತಾಯರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ನೆಲ್ಯಾಡಿ ಪರಿಸರದ ಬೆಳಕಾಗಿ ನೇಸರ ಮೂಡಿ ಬರಲಿ ಎಂದು ಶುಭ ಹಾರೈಸಿ ‘ನೇಸರ ಲೋಗೋ ‘ ಲೋಕಾರ್ಪಣೆ ಮಾಡಿದರು ,ದೇವಸ್ಥಾನದ ಪ್ರದಾನ ಕಾರ್ಯದರ್ಶಿ ರಾಕೇಶ್. ಯಸ್ ರವರು ‘ನೇಸರ ಸುದ್ದಿ’ ಸೂರ್ಯನ ಪ್ರಭೆಯಂತೆ ಬೆಳಗಲಿ ಎಂದು ಹಾರೈಸಿ ‘ನೇಸರ ಬಣ್ಣದ ಹಬ್ಬ 2021 ‘ ಆನ್‌ಲೈನ್ ಸ್ಪರ್ಧಾಕೂಟ ಫಲಕವನ್ನು ಅನಾವರಣಗೊಳಿಸಿದರು .ಗ್ರಾ.ಪ.ಸ. ರವಿಪ್ರಸಾದ್ ಶೆಟ್ಟಿ ,ಮಾಜಿ ಗ್ರಾ.ಪ.ಅದ್ಯಕ್ಷರಾದ ಗಂಗಾಧರ ಹೊಸಮನೆ ,ಗ್ರಾ.ಪ.ಸದಸ್ಯ ಜಯಾನಂದ ಬಂಟ್ರಿಯಲ್ ,ಚಂದ್ರಶೇಖರ ಬಾಣಜಾಲು ,ಉಮೇಶ ಪೂಜಾರಿ ಪೊಸೊಳಿಗೆ,ಉಪನ್ಯಾಸಕ ವಿಶ್ವನಾಥ ಶೆಟ್ಟಿ ,ಪ್ರವೀಣ್ ಕುಮಾರ್ ,ಬರವುದ ಮಾಣಿಕ್ಯ ಕೇಶವ ನೆಲ್ಯಾಡಿ ,ಮೀನಾಕ್ಷಿ ಜನಾರ್ಧನ ಶೆಟ್ಟಿ, ಕೃಷ್ಣಪ್ಪ ನಿಡ್ಡೋಡಿ ,ಮೋಕ್ಷಿತ್ ,ಉದಯ ಕುಮಾರ್ ,ಯತೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು ನಮ್ಮೂರಿನ ಸಾಮಾಜಿಕ,ಧಾರ್ಮಿಕ ,ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಧ್ವನಿಯಾಗಲಿ ‘ನೇಸರ ‘ ಎಂದು ಶುಭ ಹಾರೈಸಿದರು .ಸಂಸ್ಥೆಯ ಪಾಲುದಾರ ಸುಧೀರ್ ಕುಮಾರ್ ಕೆ.ಯಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು .ಮತ್ತೊಬ್ಬ ಪಾಲುದಾರ ಪ್ರಶಾಂತ್ ಸಿ .ಎಚ್ ಎಲ್ಲರ ಸಹಕಾರ ನಮ್ಮೊಂದಿಗಿರಲಿ ಎಂದು ಮಾತನಾಡಿ ಎಲ್ಲರಿಗೂ ವಂದಿಸಿದರು.

Leave a Reply

You May Have Missed

error: Content is protected !!