ತ್ರೋಬಾಲ್ ಹಾಗೂ ವಾಲಿಬಾಲ್ ಪಂದ್ಯದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ತ್ರೋಬಾಲ್ ಹಾಗೂ ವಾಲಿಬಾಲ್ ಪಂದ್ಯದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ನೇಸರ ಆ.19: ದ.ಕ.ಜಿ.ಪಂ..ಹಿ.ಪ್ರಾ. ಶಾಲೆ ಪಡುಬೆಟ್ಟು ಶಾಲೆಯ ಬಾಲಕಿಯರ ತಂಡ ಹಿರೆಬಂಡಾಡಿ ಶಾಲೆಯಲ್ಲಿ ನಡೆದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.
ಐಶ್ವರ್ಯ ಗೌಡ, ವಂಶಿ, ಆಶಾ, ಲಲಿತಾ, ಗ್ರೀಷ್ಮಾ, ಫಾತಿಮತ್ ಸಿಫಾನ, ಶಝಾ ಫಾತಿಮಾ, ಆಯಿಷತ್ ತಸ್ಲಿಮಾ ಹಾಗೂ ಶಝ ಭಾಗವಹಿಸಿದ್ದರು.

ಸೈಂಟ್ ಮೇರಿಸ್ ಉಪ್ಪಿನಂಗಡಿ ಶಾಲೆಯಲ್ಲಿ ನಡೆದ ವಲಯ ಮಟ್ಟದ ತ್ರೋಬಾಲ್ ನಲ್ಲಿ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ರಕ್ಷಿತ್ , ಸುದೀಪ್, ಸುದೇಶ್ ರೈ, ಕಿರಣ್, ಮಹಮ್ಮದ್ ಮಿಸ್ ಬಾಹ್, ಸನತ್, ಮಹಮ್ಮದ್ ಮುರ್ ತಳ, ನಿಖಿಲ್, ಮಹಮ್ಮದ್ ರಮೀಝ್, ಎ.ಜೆ.ಹರಿಕಿರಣ್ ಭಾಗವಹಿಸಿದ್ದರು. ಮುಖ್ಯ ಗುರುಗಳಾದ ಶ್ರೀಮತಿ ಜೆಸ್ಸಿ ಕೆ ಎ ಇವರ ಮಾರ್ಗದರ್ಶನದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಲೀಲಾವತಿ ಎಂ ಇವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ. ಶಾಲೆಯ ಶಿಕ್ಷಕ ವೃಂದದವರು ಸಹಕಾರ ನೀಡಿರುತ್ತಾರೆ.

Leave a Reply

You May Have Missed

error: Content is protected !!