ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ನ ಮಹಾಸಭೆ

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ನ ಮಹಾಸಭೆ

ನೇಸರ ಆ.28: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ನ ಬೆಳ್ತಂಗಡಿ ತಾಲೂಕು ಘಟಕದ ದ್ವಿತೀಯ ವರ್ಷದ ಮಹಾಸಭೆ, ಕುಟುಂಬ ಮಿಲನ, ಗೌರವಾಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಲಾಯಿಲದ ಶ್ರೀಗುರುರಾಘವೇಂದ್ರ ಮಠದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ರವಿಕುಮಾರ್ ಭಟ್ ಪಜಿರಡ್ಕ ವಹಿಸಿದ್ದರು. ಮಹೇಶ ಭಟ್ ಕಜೆ ಹಾಗೂ ರಾಮಕೃಷ್ಣ ಚೊಕ್ಕಾಡಿ ಜಿಲ್ಲಾ ಸಂಯೋಜಕರಾದ ಶ್ರೀರಂಗ ಐತಾಳ ಕದ್ರಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ ತಂತ್ರಿ, ತಾಲೂಕು ಉಪಾಧ್ಯಕ್ಷರಾದ ರಾಘವೇಂದ್ರ ಬಾಂಗಿಣ್ಣಾಯ ಕುಂಟಿಣಿ ಉಪಸ್ಥಿತರಿದ್ದರು. 12 ಮಂದಿ ಶಿಕ್ಷಕರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ 32ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅನುರಾಧ ಕೆ.ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೃಷ್ಣ ಕುಮಾರ್ ಐತಾಳ ವಂದಿಸಿದರು

Leave a Reply

You May Have Missed

error: Content is protected !!