ಇಚ್ಲಂಪಾಡಿ: ಆ್ಯಸಿಡ್ ಸೇವಿಸಿ ಆತ್ಮಹತ್ಯೆ

ಇಚ್ಲಂಪಾಡಿ: ಆ್ಯಸಿಡ್ ಸೇವಿಸಿ ಆತ್ಮಹತ್ಯೆ

ನೇಸರ ಸೆ.03: ಕಡಬ ತಾಲೂಕು ಇಚ್ಲಂಪಾಡಿಯ ಉರೇಜಾಲ್ ನಿವಾಸಿ ಫಿಲಿಪ್ ಟಿ.ಎಮ್(52.ವ) ಮನೆಯ ತೋಟದಲ್ಲಿ ದಿನಾಂಕ 28-08- 22ರಂದು ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ತೀವ್ರ ಅಸ್ವಸ್ಥಗೊಂಡ ಅವರನ್ನು ತಕ್ಷಣ ನೆಲ್ಯಾಡಿಯ ಅಶ್ವಿನಿ ಆಂಬುಲೆನ್ಸ್ ನಲ್ಲಿ ಮಂಗಳೂರಿಗೆ ಸಾಗಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಇದ್ದ ಅವರು ನಿನ್ನೆ ರಾತ್ರಿ 12.30ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರಿಗೆ ಹೆಂಡತಿ ಹಾಗೂ ಒಂದು ಗಂಡು ಒಂದು ಹೆಣ್ಣು ಮಕ್ಕಳು ಇದ್ದಾರೆ.

Leave a Reply

You May Have Missed

error: Content is protected !!