ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಕನ್ಯಾ ಮರಿಯ ಜಯಂತಿ ಹಬ್ಬದ ಆಚರಣೆ

ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಕನ್ಯಾ ಮರಿಯ ಜಯಂತಿ ಹಬ್ಬದ ಆಚರಣೆ

ನೇಸರ ಸೆ.08: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಸಂಭ್ರಮದ ಕನ್ಯಾ ಮರಿಯ ಜಯಂತಿ ಹಬ್ಬದ ಆಚರಣೆಯು ಮಾತೆ ಮರಿಯಮ್ಮರವರಿಗೆ ಹೂವುಗಳನ್ನು ಅರ್ಪಿಸುವುದರೊಂದಿಗೆ ಜರುಗಿತು.
ಪ್ರಧಾನ ಯಾಜಕರಾಗಿ ವ೦ದನಿಯ ಅಶೋಕ್ ಡಿಸೋಜ, ವಂದನೀಯ ಲೂಯಿಸ್ ಜಗದೀಶ್ ಪಿಂಟೋ ಬಲಿಪೂಜೆ ಅರ್ಪಿಸಿದರು. ಬಳಿಕ ಆರು ವಾಳ್ಯದ ಗುರಿಕಾರರು ಆಶೀರ್ವಾದಿಸಿದ ಹೊಸತನೆಯನ್ನು ಪ್ರತಿ ಕುಟುಂಬಗಳಿಗೆ ವಿತರಿಸಿದರು. ಒಂದೇ ಕುಟುಂಬವೆಂಬ ಭಾವನೆಯೊಂದಿಗೆ ಹೊಸತೆನೆಯನ್ನು ಹಾಲಿನೊಂದಿಗೆ ಸರ್ವ ಕ್ರೈಸ್ತ ಬಾಂಧವರು ಸ್ವೀಕರಿಸಿದರು. ಚರ್ಚಿನ ಎಲ್ಲಾ ಸಂಘಟನೆಗಳು ಸಹಕರಿಸಿದರು. ಸರ್ವ ಕ್ರೈಸ್ತ ಬಾಂಧವರನ್ನು, ದಾನಿಗಳನ್ನು, ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಸರ್ವರನ್ನು ಈ ಸಂಧರ್ಭದಲ್ಲಿ ಫಾ|| ಜಗದೀಶ್ ಪಿಂಟೋರವರು ವಂದಿಸಿದರು. ಸಂಪ್ರದಾಯದಂತೆ ಎಲ್ಲರಿಗೂ ಕಬ್ಬು ವಿತರಿಸಲಾಯಿತು.

Leave a Reply

You May Have Missed

error: Content is protected !!