ಜಿಲ್ಲಾ ಆರೋಗ್ಯ ಇಲಾಖೆಯಿಂದ ಅಂಗವಿಕಲತೆ ಗುರುತಿಸುವಿಕೆ ಮತ್ತು ಯು ಡಿ ಐ ಡಿ ಕಾರ್ಡ್ ನೋoದಣಿ ಶಿಬಿರ

ಜಿಲ್ಲಾ ಆರೋಗ್ಯ ಇಲಾಖೆಯಿಂದ ಅಂಗವಿಕಲತೆ ಗುರುತಿಸುವಿಕೆ ಮತ್ತು ಯು ಡಿ ಐ ಡಿ ಕಾರ್ಡ್ ನೋoದಣಿ ಶಿಬಿರ

ನೇಸರ ಸೆ.13: ನೆರಿಯಾ ಸಿಯೋನ್ ಆಶ್ರಮದಲ್ಲಿ ಅಂಗವಿಕಲತೆ ಗುರುತಿಸುವಿಕೆ ಮತ್ತು ಯು ಡಿ ಐ ಡಿ ಕಾರ್ಡ್ ನೋoದಣಿ ಶಿಬಿರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೆ.12 ರಂದು ಆಯೋಜಿಸಲಾಗಿತ್ತು.

ಶಿಬಿರವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಿಯೋನ್ ಆಶ್ರಮದ ಮುಖ್ಯಸ್ಥ ಯು.ಸಿ.ಪೌಲೋಸ್, ದ ಕ ಜಿಲ್ಲೆಯ ಎಂಡೋಸಲ್ಪಾನ್ ಪುನರ್ವಸತಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್, ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಕಾಂತ್, ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಹಾಜರಿದ್ದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಾ.ಸುನಿಲ್, ಬಂಟ್ವಾಳ ತಾಲೂಕು ಆಸ್ಪತ್ರೆ ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವಿವಿಧ ತಜ್ಞ ವೈದ್ಯರು ಆಗಮಿಸಿದ್ದರು. ಆಶ್ರಮದ ಹಾಗೂ ಆಸುಪಾಸಿನ ಒಟ್ಟು 84 ಜನ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

Leave a Reply

You May Have Missed

error: Content is protected !!