ಕಡಬ ತಹಶೀಲ್ದಾರ್ ಆಗಿ ರಮೇಶ್ ಬಾಬು ; ಅನಂತಶಂಕರ್ ಉಡುಪಿಗೆ ವರ್ಗಾವಣೆ

ಕಡಬ ತಹಶೀಲ್ದಾರ್ ಆಗಿ ರಮೇಶ್ ಬಾಬು ; ಅನಂತಶಂಕರ್ ಉಡುಪಿಗೆ ವರ್ಗಾವಣೆ

ನೇಸರ ಸೆ.16: ಕಡಬ ತಾಲೂಕು ತಹಶೀಲ್ದಾರ್ ಬಿ ಅನಂತಶಂಕರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುರಸಭಾ ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ತೆರವಾದ ಸ್ಥಾನಕ್ಕೆ ರಮೇಶ್ ಬಾಬು ಟಿ., ತಹಶೀಲ್ದಾರ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಯವರಿಂದ ಅನುಮೋದಿತವಾಗಿರುವ ಕರ್ನಾಟಕ ರಾಜ್ಯಪಾಲ ಆದೇಶಾನುಸಾರ ಜಿ ಎನ್ ಸುಶೀಲಾ, ಸರಕಾರ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ ಇವರು ಅಧಿಸೂಚನೆಯನ್ನು ಹೊರಡಿಸಿದ್ದಾರೆ.

Leave a Reply

You May Have Missed

error: Content is protected !!