ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆ

ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆ

ನೇಸರ ಡಿ07: ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆ ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಕಾಮಧೇನು ಸಭಾಂಗಣದಲ್ಲಿ ದಿನಾಂಕ 07-12-21ನೇ ಮಂಗಳವಾರದಂದು ನಡೆಯಿತು. ಸುದರ್ಶನ್ ಮೂಡುಬಿದಿರೆ, ಭಾಜಪ ಜಿಲ್ಲಾ ಅಧ್ಯಕ್ಷರು ಸಭಾಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಮತ್ತು ಬಂದರು ಸಚಿವ ಅಂಗಾರ, ವಿಧಾನಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ರಾಮದಾಸ್ ಬಂಟ್ವಾಳ, ಬೂಡಿಯಾರ್ ರಾಧಾಕೃಷ್ಣ ರೈ, ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಆರು ಗ್ರಾಮ ಪಂಚಾಯಿತಿನ ಭಾಜಪದ ಎಲ್ಲಾ 45 ಸದಸ್ಯರು ಮತ್ತು ಕಾರ್ಯಕರ್ತರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖರಾದ ಉಮೇಶ್ ಶೆಟ್ಟಿ, ಸುಧೀರ್ ,ದೇವದಾಸ್ ಬಂಟ್ವಾಳ, ರಾಕೇಶ್ ರೈ, ಸುಬೋದ್ ರೈ, ಕೃಷ್ಣ ಶೆಟ್ಟಿ ಕಡಬ, ಬಾಲಕೃಷ್ಣ ಬಾಣಜಾಲು, ಸತೀಶ್ ಹಾಜರಿದ್ದರು.
ಹರೀಶ್ ಸ್ವಾಗತಿಸಿ, ಶಕ್ತಿಕೇಂದ್ರದ ಅಧ್ಯಕ್ಷ ಭಾಸ್ಕರ್ ಗೌಡ ವಂದಿಸಿದರು, ಪ್ರಧಾನ ಕಾರ್ಯದರ್ಶಿ ರವಿ ಪ್ರಸಾದ್ ಶೆಟ್ಟಿ, ಶ್ರೀಧರ ಗೌಡ,ಚಂದ್ರಶೇಖರ, ಮಹೇಶ್ ಪಿ, ಕುಶಾಲಪ್ಪ ,ರೋಹಿತ್ ಶಿರಾಡಿ, ವಿನಯಕುಮಾರ, ಶ್ರೀಲತಾ ಮೊದಲಾದವರು ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಸುಧೀರ್ ಕುಮಾರ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!