ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಖೋ ಖೋ ಪಂದ್ಯಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಖೋ ಖೋ ಪಂದ್ಯಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ನೆಲ್ಯಾಡಿ: ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಬೀದರ್ ನಲ್ಲಿ ನಡೆದ ರಾಜ್ಯ ಹಾಗೂ ಕ್ಷೇತ್ರ ಮಟ್ಟದ ಖೋ ಖೋ ಪಂದ್ಯಾಕೂಟದಲ್ಲಿ ಶ್ರೀರಾಮ ವಿದ್ಯಾಲಯ ನೆಲ್ಯಾಡಿ ಗೆಲುವನ್ನು ಸಾಧಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

ಮುಂದಿನ ರಾಷ್ಟ್ರಮಟ್ಟದ ಪಂದ್ಯ ಮಧ್ಯಪ್ರದೇಶ ದಲ್ಲಿ ನಡೆಯಲಿದೆ. ಸಾನ್ವಿ, ಧನ್ಯ, ಅದ್ವಿಕಾ, ಪ್ರತಿಕ್ಷಾ ಪಿ, ಯೋಕ್ಷಿತ, ಕುಸ್ಮಿತಾ, ನಿಖಿತಾ, ಆಶಿಕಾ, ಹರ್ಷಿತ, ಚೈತನ್ಯ ಎಚ್, ಪ್ರತಿಕ್ಷಾ, ಮೇಘನಾ ಇವರು ಶಾಲೆಯನ್ನು ಪ್ರತಿನಿಧಿಸಿದ ಹೆಮ್ಮೆಯ ವಿದ್ಯಾರ್ಥಿನಿಯರು. ಈ ತಂಡದ ತರಬೇತಿದಾರರಾಗಿ ಸಂತೋಷ್ ಕೋಲ್ಯೂಟ್ಟು ಇವರು ಸಹಕರಿಸಿದರು.
ಶ್ರೀರಾಮ ವಿದ್ಯಾಲಯದ ಆಡಳಿತ ಸಮಿತಿ, ಶಿಕ್ಷಕರ, ಸಿಬ್ಬಂದಿ ವರ್ಗ,ಪೋಷಕರ ಮತ್ತು ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಅಭಿನಂದಿಸಿದರು.

Leave a Reply

You May Have Missed

error: Content is protected !!