ಉಪ್ಪಿನಂಗಡಿ ಬಳಿ ಸರಣಿ ಅಪಘಾತ: ತಪ್ಪಿದ ಭಾರೀ ದುರಂತ, 3 ಮಂದಿಗೆ ಗಾಯ

ಉಪ್ಪಿನಂಗಡಿ ಬಳಿ ಸರಣಿ ಅಪಘಾತ: ತಪ್ಪಿದ ಭಾರೀ ದುರಂತ, 3 ಮಂದಿಗೆ ಗಾಯ

ನೇಸರ ಡಿ09: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಂಜಳ ಎಂಬಲ್ಲಿ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿ ರಸ್ತೆ ಮಧ್ಯೆ ಬಿದ್ದಿದೆ. ಅಪಘಾತಕ್ಕೀಡಾದ ಕಾರಿನ ಹಿಂದೆ ಬರುತ್ತಿದ್ದ ಇನ್ನೊಂದು ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದು ಸರಣಿ ಅಪಘಾತದಲ್ಲಿ 3 ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಕಾರು ಚಲಾಯಿಸಿಕೊಂಡು ಬರುತ್ತಿದ್ದ ನೆಲ್ಯಾಡಿಯ ಹೊಟೇಲ್ ಹೊಂದಿರುವ ಉದ್ಯಮಿ ಮೆಲ್ಕಾರು ನಿವಾಸಿ ಸಂತೋಷ್ ಎಂಬವರ ಮಹೇಂದ್ರ ಎಕ್ಸ್‌ಯು-500 ಕಾರಿಗೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ಸಣ್ಣಪುಟ್ಟ ತರಚಿದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿ ಚಾಲಕ ತಮಿಳುನಾಡು ನಿವಾಸಿ ಶೀತಲ್ ಮತ್ತು ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯ ಚಾಲಕ ಬೆಂಗಳೂರು ಅತ್ತಿಬೆಲೆ ನಿವಾಸಿ ಹೇಮಂತ್ ಗಾಯಗೊಂಡಿದ್ದು, ಈರ್ವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Leave a Reply

You May Have Missed

error: Content is protected !!