ಕೊಯಿಲ: ಗೂಡ್ಸ್ ಟೆಂಪೋ – ಬೈಕ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಕೊಯಿಲ: ಗೂಡ್ಸ್ ಟೆಂಪೋ – ಬೈಕ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಬಂಟ್ವಾಳ: ಬಂಟ್ವಾಳ ತಾಲೂಕು ಕೊಯಿಲ ಪೇಟೆ ಸಮೀಪದ ಕುದ್ಮಾಣಿ ಕಿರು ಸೇತುವೆ ಮೇಲೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ‌ ನಡೆದಿದೆ.

ಮೃತರನ್ನು ತೆಂಕ ಮಿಜಾರು ಬರ್ಕೆ ನಿವಾಸಿ ಗುಣಪಾಲ ಸೇಮಿತ ಅವರ ಪುತ್ರ ದಿನೇಶ ಸೇಮಿತ (32 ವ) ಎಂದು ಗುರುತಿಸಲಾಗಿದೆ.

ಬೈಕ್ ಸವಾರ ಮೂಡುಬಿದ್ರೆ ಕಡೆಯಿಂದ ಬಂಟ್ವಾಳ ಕಡೆಗೆ ಹೋಗುತ್ತಿದ್ದ ವೇಳೆ, ಬಿ.ಸಿ.ರೋಡಿನಿಂದ ಮೂಡುಬಿದ್ರೆ ಗೆ ಹೋಗುತ್ತಿದ್ದ ಬೀಡಿ ಸಂಸ್ಥೆಯೊಂದರ ಗೂಡ್ಸ್ ಟೆಂಪೋ ಢಿಕ್ಕಿಯಾಗಿದೆ, ಬೈಕ್ ಸವಾರನ ತಲೆ ರಸ್ತೆಗೆ ಬಡಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಮೆಲ್ಕಾರ್ ಸಂಚಾರಿ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Leave a Reply

You May Have Missed

error: Content is protected !!