ಉಡುಪಿ ಜೇಸಿಐ ವಲಯಾಧ್ಯಕರ ಅಧಿಕೃತ ಭೇಟಿ ಕಾಯ೯ಕ್ರಮ

ಉಡುಪಿ ಜೇಸಿಐ ವಲಯಾಧ್ಯಕರ ಅಧಿಕೃತ ಭೇಟಿ ಕಾಯ೯ಕ್ರಮ

ಉಡುಪಿ: ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಜೇಸಿಐ ಭಾರತ ವಲಯ 15 ರ ವಲಯಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ ರವರ ಅಧಿಕೃತ ಭೇಟಿ ಕಾಯ೯ಕ್ರಮ ಅ.27 ರಂದು ಗುರುವಾರ ಸಿ.ಎಸ್.ಐ ಬಾಲಕರ ಹಾಸ್ಟೆಲ್ ಸಭಾಂಗಣದಲ್ಲಿ ನಡೆಯಿತು.
ಕಾಯ೯ಕ್ರಮ ಉದ್ದೇಶಿಸಿ ಮಾತನಾಡಿದ ವಲಯಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ, ಜೇಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನದ ಶ್ರೇಷ್ಠ ಸಂಸ್ಥೆಯಾಗಿದ್ದು ಇಲ್ಲಿರುವ ವಿವಿಧ ರೀತಿಯ ತರಬೇತಿ ಪಡೆದು ಉತ್ತಮ ಜೀವನ ಸಾಗಿಸಬಹುದು. ಈ ಘಟಕದ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ವಲಯ ಪ್ರಥಮ ಮಹಿಳೆ ಮರಿಯಾ ರೋಡಿಗ್ರಸ್, ವಲಯಾಧಿಕಾರಿಗಳಾದ ಮೋಹನ್ ನಕ್ರೆ, ಉದಯ ನಾಯ್ಕ, ಘಟಕಾಧ್ಯಕ್ಷ ಡಾ.ವಿಜಯ್ ನೆಗಳೂರು, ಮಹಿಳಾ ಜೇಸಿ ಅಧ್ಯಕ್ಷೆ ಡಾ.ಚಿತ್ರಾ ನೆಗಳೂರು, ನೈನಾ ನಾಯಕ್ ಮುಂತಾದವರಿದ್ದರು. ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷರಾಗಿರುವ ಸಂದೀಪ್ ಕುಮಾರ್, ವಲಯ ನಿರ್ದೇಶಕ ರಾಘವೇಂದ್ರ ಪ್ರಭು ಕರ್ವಾಲ್ ಉಪಸ್ಥಿತರಿದ್ದರು. ಈ ಸಂದಭ೯ದಲ್ಲಿ ವಲಯಾಧ್ಯಕ್ಷ ದಂಪತಿಗಳನ್ನು ಗೌರವಿಸಲಾಯಿತು.

Leave a Reply

You May Have Missed

error: Content is protected !!