ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಬಾಲವನದಲ್ಲಿ ವಿಜ್ಞಾನ ವಿಸ್ಮಯ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಬಾಲವನದಲ್ಲಿ ವಿಜ್ಞಾನ ವಿಸ್ಮಯ

ಪುತ್ತೂರು: ಮಕ್ಕಳ ದಿನಾಚರಣೆಯ ಪ್ರಯುಕ್ತ ಬಾಲವನದಲ್ಲಿ ನಡೆದ “ಬಾಲವನದಲ್ಲಿ ಬಾಲರು” ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ವಿಸ್ಮಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತದ ಮಾದರಿ ಹಾಗೂ ಪ್ರಯೋಗಗಳನ್ನು ಮಾಡಿ ತೋರಿಸಿಕೊಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅನೇಕ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಈ ಎಲ್ಲಾ ಪ್ರಯೋಗಗಳನ್ನು ನೋಡಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡರು ಹಾಗೂ ಬಹಳ ಖುಷಿ ಪಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದ ಪೋಷಕರು ಹಾಗೂ ಅಧ್ಯಾಪಕರು ಮಕ್ಕಳ ಈ ಪ್ರಯೋಗಗಳನ್ನು ನೋಡಿ ಶ್ಲಾಘಿಸಿದರು.

Leave a Reply

You May Have Missed

error: Content is protected !!