ಕಡಬ : ದ.ಕ ಯುವ ಮೋರ್ಚ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ; ನೆಲ್ಯಾಡಿ ಬೆಥನಿ ವಿದ್ಯಾರ್ಥಿ ಸಮ್ಯಕ್ತ್ ಜೈನ್ ದ್ವಿತೀಯ

ಕಡಬ : ದ.ಕ ಯುವ ಮೋರ್ಚ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ; ನೆಲ್ಯಾಡಿ ಬೆಥನಿ ವಿದ್ಯಾರ್ಥಿ ಸಮ್ಯಕ್ತ್ ಜೈನ್ ದ್ವಿತೀಯ

ಕಡಬ : ಖ್ಯಾತ ಕವಿ ದಿ.ಡಾ.ಸಿದ್ದಲಿಂಗಯ್ಯನವರ ನೆನಪಿಗಾಗಿ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಯುವ ಮೋರ್ಚ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸಿತ್ತು. ಇದರಲ್ಲಿ ಕಾಲೇಜು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಸಮ್ಯಕ್ತ್ ಜೈನ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಮಂಗಳೂರಿನ ಜಿಲ್ಲಾ ಅಂಬೆಡ್ಕರ್ ಭವನದಲ್ಲಿ ನ.13 ರಂದು ನಡೆದ ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚ ದಕ್ಷಿಣ ಕನ್ನಡದ ಸಮಾವೇಶದಲ್ಲಿ ಸಚಿವರು-ಸಂಸದರು-ಶಾಸಕರ ಉಪಸ್ಥಿತಿಯಲ್ಲಿ ಬಹುಮಾನ ವಿತರಿಸಲಾಯಿತು.

ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಮಂಜುಳಾ ದಂಪತಿಯ ಪುತ್ರರಾಗಿರುವ ಇವರು ಇದುವರೆಗೆ ಮೂರು ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಿ ಸಾಹಿತ್ಯ ಲೋಕದಲ್ಲಿ ಮುಂದುವರೆಯುತ್ತಿದ್ದು, ಇವರು ಈಗಾಗಲೇ ಹಲವಾರು ರಾಜ್ಯ ಅಂತರ್ರಾಜ್ಯ ಮಟ್ಟದ ಬಹುಮಾನ-ಸನ್ಮಾನಗಳಿಗೆ ಭಾಜನರಾಗಿರುತ್ತಾರೆ.

ಪ್ರಸ್ತುತ ತೃತೀಯ ವರ್ಷದ ಪದವಿ ವಿದ್ಯಾಭ್ಯಾಸವನ್ನು ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜು ಇಲ್ಲಿ ಮುಂದುವರಿಸುತ್ತಿದ್ದಾರೆ .

Previous post

ಕಡಬ: ವಿದ್ಯಾರ್ಥಿ ಜೀವನ ಬದುಕಿನ ಪ್ರಮುಖ ಘಟ್ಟ, ವಿದ್ಯಾರ್ಜನೆಗೆ ಕೇವಲ ಅಂಕ ಪಟ್ಟಿ ಸೀಮೀತವಾಗಬಾರದು ➽ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್

Next post

ನಿದ್ರಾವಸ್ಥೆಯಲ್ಲಿ ಮಲಗಿದ ಕೌಕ್ರಾಡಿ ಪಂಚಾಯತ್ : ಗಬ್ಬೆದ್ದು ನಾರುತ್ತಿದ್ದರೂ ಕ್ಯಾರೆ ಎನ್ನದ ಪಂ.ಅ.ಅಧಿಕಾರಿ, ಜನಪ್ರತಿನಿಧಿಗಳು

Leave a Reply

You May Have Missed

error: Content is protected !!