ನೆಲ್ಯಾಡಿ ಸುವಿದಾ ಕೇಂದ್ರ ಕೊಠಡಿ ಡೆಂಜ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆ

ನೆಲ್ಯಾಡಿ ಸುವಿದಾ ಕೇಂದ್ರ ಕೊಠಡಿ ಡೆಂಜ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇದರ ನೆಲ್ಯಾಡಿ ವಲಯದ ವತಿಯಿಂದ ಪಡುಬೆಟ್ಟು ಮತ್ತು ಕೌಕ್ರಾಡಿ ಕ್ಷೇತ್ರಕ್ಕೆ ಸುವಿದಾ ಕೇಂದ್ರದ ಉದ್ಘಾಟನೆಯು ನೆಲ್ಯಾಡಿಯ ಡೆಂಜ ಕಾಂಪ್ಲೆಕ್ಸ್‌ನಲ್ಲಿ ನೆರವೇರಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಹಾರ್ಪಳ ಅವರು ಉದ್ಘಾಟಿಸಿದರು. ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕೌಕ್ರಾಡಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ, ಪಡುಬೆಟ್ಟು ಒಕ್ಕೂಟದ ಅಧ್ಯಕ್ಷ ಜೋನ್ ಮೊಂತೆರೊ, ವಲಯ ಮೇಲ್ವಿಚಾರಕ ವಿಜೇಶ್ ಜೈನ್, ಡೆಂಜ ಕಾಂಪ್ಲೆಕ್ಸ್‌ನ ಮಾಲಕ ಚಂದ್ರಶೇಖರ, ಒಕ್ಕೂಟದ ಮಾಜಿ ಅಧ್ಯಕ್ಷೆ ಸವಿತಾ, ಮಾಜಿ ಉಪಾಧ್ಯಕ್ಷ ರಮೇಶ್ ಬಾಣಜಾಲು, ಸೇವಾಪ್ರತಿನಿಧಿಗಳಾದ ನಮಿತಾ ಶೆಟ್ಟಿ, ಸುಮನ ಎಸ್, ಮೋಹಿನಿ ಮತ್ತು ಹೇಮಾವತಿ ಜೆ, ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!