ಬೆಳ್ತಂಗಡಿ: ಟ್ಯಾಕ್ಟರ್ ಪಲ್ಟಿ; ಕಾರ್ಮಿಕ ಓರ್ವ ಸಾವು

ಬೆಳ್ತಂಗಡಿ: ಟ್ಯಾಕ್ಟರ್ ಪಲ್ಟಿ; ಕಾರ್ಮಿಕ ಓರ್ವ ಸಾವು

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಎಳನೀರಿನ ಬಂಗಾರಪಲ್ಕೆ ಎಂಬಲ್ಲಿ ಕಿಂಡಿ ಅಣೆಕಟ್ಟಿನ ಸಮೀಪದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದಲ್ಲಿಗೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವೇಳೆ ಟ್ಯಾಕ್ಟರ್ ಪಲ್ಟಿಯಾಗಿ ಅದರಲ್ಲಿದ್ದ ಕಾರ್ಮಿಕ ಗಂಭೀರ ಗಾಯಗೊಂಡಿದ್ದು ಆತನನ್ನು ಕಳಸ ಸಮುದಾಯ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯು ಚಿಕ್ಕಮಗಳೂರಿನ ಲೋಕೇಶ್(ವ.32). ಚಾಲಕ ದೀಪಕ್(31) ಹಾಗೂ ಇನ್ನೋರ್ವ ಕಾರ್ಮಿಕ ಫಕಿರೇಶ್(30) ಗ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ
ಟ್ರ್ಯಾಕ್ಟರ್ ನಲ್ಲಿ ಕಬ್ಬಿಣದ ರಾಡುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಅದರ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಲೋಕೇಶ್ ಅವರ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಕ್ಟರ್ ಮಗುಚಿ ಬಿದ್ದು ಅದರಡಿ ಸಿಲುಕಿಕೊಂಡು ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಟ್ರ್ಯಾಕ್ಟರ್ ಮಗುಚಿದ ರಭಸಕ್ಕೆ ಇಂಜಿನ್ ಟ್ರಾಲಿಯಿಂದ ಕಳಚಿಕೊಂಡು ಪಕ್ಕದ ತೋಟಕ್ಕೆ ಉರುಳಿದೆ.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous post

ಅರಸಿನಮಕ್ಕಿಯಲ್ಲಿ 50 ಫೀಟ್ ಎತ್ತರದ ಗಾಳಿಪಟ ತಯಾರಿ|| ಆಳ್ವಾಸ್ ಜಾಂಬೂರಿ ಕಾರ್ಯಕ್ರಮದಲ್ಲಿ ಪ್ರದರ್ಶನ

Next post

ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ

Leave a Reply

You May Have Missed

error: Content is protected !!