ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ

ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ

ರಾಮಕುಂಜ: ಶುಬುಕಾನ್ ಕರಾಟೆ ಎಸೋಸಿಯೇಷನ್ ಆಫ್ ಇಂಡಿಯಾವು, ಸೈಂಟ್ ಜೋಸೆಫ್ ಹೈಸ್ಕೂಲ್ ತಿರುತ್ವಪುರಂ, ಕನ್ಯಾಕುಮಾರಿ ಜಿಲ್ಲೆ ಇಲ್ಲಿ ಆಯೋಜಿಸಿದ ಶುಬುಕಾನ್ 18ನೆ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ 2022 ರಲ್ಲಿ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿದ್ಯಾರ್ಥಿ ಆದಂತಹ ಪ್ರಣಂ ದೇವ ಕುಮಿತಿ ಮತ್ತು ಟೀಮ್ ಕಟ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಅದಲ್ಲದೆ ಕಟ ವಿಭಾಗದಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ.

ಇನ್ನೋರ್ವ ಸ್ಪರ್ಧಿ, ಕಾಲೇಜಿನ ವಿದ್ಯಾರ್ಥಿ ನಾಯಕ, ವಿಜ್ಞಾನ ವಿದ್ಯಾರ್ಥಿ ಗಗನ್ ದೀಪ್ ಇವರು ಕಟ ವಿಭಾಗದಲ್ಲಿ ಚಿನ್ನ ಮತ್ತು ಕುಮಿತಿ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಗಳಿಸಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರ ವಿಶೇಷ ಪ್ರೋತ್ಸಾಹದ ಮೂಲಕ ವಿದ್ಯಾರ್ಥಿಗಳು ಈ ಸಾಧನೆಯನ್ನ ಮಾಡಿದ್ದಾರೆ.

Leave a Reply

You May Have Missed

error: Content is protected !!