ಸುಳ್ಯ: ಮದುವೆ ದಿಬ್ಬಣಕ್ಕೆ ತೆರಳುತ್ತಿದ್ದ ಕಾರು ಪಲ್ಟಿ: ತಾಯಿ ಮಗು ಮೃತ್ಯು, ನಾಲ್ವರು ಗಂಭೀರ

ಸುಳ್ಯ: ಮದುವೆ ದಿಬ್ಬಣಕ್ಕೆ ತೆರಳುತ್ತಿದ್ದ ಕಾರು ಪಲ್ಟಿ: ತಾಯಿ ಮಗು ಮೃತ್ಯು, ನಾಲ್ವರು ಗಂಭೀರ

ಸುಳ್ಯ: ಮದುವೆ ದಿಬ್ಬಣಕ್ಕೆ ತೆರಳುತ್ತಿದ್ದ ಇನ್ನೋವಾ ಕಾರು ಸ್ಕಿಡ್ ಆಗಿ ಪಲ್ಟಿಯಾಗಿ ಮರಕ್ಕೆ ಗುದ್ದಿದ ಪರಿಣಾಮ ಸುಳ್ಯ ಮೂಲದ ತಾಯಿ, ಮಗು ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗೊಂಡ ದಾರುಣ ಘಟನೆ ಜಾಲ್ಸೂರು ಕಾಸರಗೋಡು ರಸ್ತೆಯ ಪರಪ್ಪೆ ಎಂಬಲ್ಲಿ ಸೋಮವಾರ ಸಂಭವಿಸಿದೆ.
ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ಶಾಹಿನಾ (28) ಹಾಗೂ ಅವರ ಮಗು 3 ವರ್ಷ ಪ್ರಾಯದ ಶಜಾ ಮೃತರು.
ಕಾರಲ್ಲಿದ್ದ ನಾಲ್ವರು ತೀವ್ರ ಗಾಯಗೊಂಡಿದ್ದು, ಗಾಯಾಳುಗಳನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟ ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ತರಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

You May Have Missed

error: Content is protected !!