ರಾಮಕುಂಜ: ಕೆರೆಗೆ ಬಿದ್ದ ಕಾಡುಕೋಣ

ರಾಮಕುಂಜ: ಕೆರೆಗೆ ಬಿದ್ದ ಕಾಡುಕೋಣ

ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಾರಿಜಾಲ್ ಸಾಂತಪ್ಪ ಗೌಡ ಎಂಬವರ ತೋಟದ ಕೆರೆಗೆ ಕಾಡುಕೋಣವೊಂದು ಬಿದ್ದ ಘಟನೆ ಡಿ.೧೩ರಂದು ನಡೆದಿದೆ.
ಕೆರೆ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಕಾಡುಕೋಣವನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಯವರ ಗಮನಕ್ಕೆ ತಂದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಕೆರೆಯ ಒಂದು ಭಾಗದ ಮಣ್ಣು ಜರಿದು ಕಾಡುಕೋಣ ಮೇಲಕ್ಕೆ ಬರಲು ದಾರಿಮಾಡಿಕೊಟ್ಟರು. ಮೇಲೆ ಬಂದ ಕಾಡುಕೋಣ ತೋಟದ ಮಧ್ಯೆ ಓಡಿ ಕಾಡಿನತ್ತ ತೆರೆಳಿದೆ ಎಂದು ವರದಿಯಾಗಿದೆ.

Leave a Reply

You May Have Missed

error: Content is protected !!