ಬಂದಾರು ಗ್ರಾ .ಪಂಚಾಯತ್ ಸಿಬ್ಬಂದಿ ಲಲಿತ ಅನಾರೋಗ್ಯದಿಂದ ನಿಧನ

ಬಂದಾರು ಗ್ರಾ .ಪಂಚಾಯತ್ ಸಿಬ್ಬಂದಿ ಲಲಿತ ಅನಾರೋಗ್ಯದಿಂದ ನಿಧನ

ಬಂದಾರು: ಇಲ್ಲಿನ ಗ್ರಾಮ ಪಂಚಾಯತ್ ಜನಸ್ನೇಹಿ ಉದ್ಯೋಗ ಖಾತ್ರಿ ಡಾಟಾ ಎಂಟ್ರಿ ಸಿಬ್ಬಂದಿ ಮೊಗ್ರು ಗ್ರಾಮದ ನಾಯಿಮಾರು ಲಲಿತ(38.ವ) ಇವರು ಅನಾರೋಗ್ಯದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ವಿಧಿವಿಶರಾದರು.

ಮೃತರು ಪತಿ ಲವ, ಗಂಡು ಮಕ್ಕಳಾದ ಸ್ವಸ್ಥಿಕ್, ಸಾಕ್ಷಿತ್ ಇವರನ್ನು ಅಗಲಿದ್ದಾರೆ. ಬಂದಾರು ಗ್ರಾಮ ಪಂಚಾಯತ್ ನಲ್ಲಿ 14 ವರ್ಷ ಸೇವೆ ಸಲ್ಲಿಸಿರುತ್ತಾರೆ. ಜನರ ಜೊತೆ ನಗುಮೊಗದ ಜನಸ್ನೇಹಿ ಕೆಲಸ ಕಾರ್ಯದಲ್ಲಿ ನಿರತರಾಗಿ, ಅಪಾರ ಜನರ ಪ್ರೀತಿ ಪಾತ್ರರಾಗಿದ್ದಾರೆ.
ಗ್ರಾ.ಪಂ ಅಧ್ಯಕ್ಷರಾದ ಪರಮೇಶ್ವರಿ ಗೌಡ, ಉಪಾಧ್ಯಕ್ಷರಾದ ಗಂಗಾಧರ, ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಾ.ಪಂ ಸದಸ್ಯರು ಸಿಬ್ಬಂದಿ ವರ್ಗ ಊರಿನ ಗಣ್ಯರು ಸಂತಾಪ ಸಲ್ಲಿಸಿದರು.

Leave a Reply

You May Have Missed

error: Content is protected !!