ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ

ಅಲಂಕಾರು: ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 27.12.2022 ರಂದು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಅಲಂಕಾರು ಇಲ್ಲಿ ನೆರವೇರಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ನಿಂಗಯ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕಾರ್ಯದರ್ಶಿಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಇವರು ವಹಿಸಿದ್ದರು. ಉದ್ಘಾಟನೆಯನ್ನು ದಯಾನಂದ ರೈ ಮನವಳಿಕೆ, ಸಂಚಾಲಕರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು, ಅಲಂಕಾರು ಇವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲೋಕೇಶ್ ಎಸ್.ಆರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು, ಸದಾನಂದ ಆಚಾರ್ಯ ಅಧ್ಯಕ್ಷರು ಗ್ರಾಮ ಪಂಚಾಯತ್ ಅಲಂಕಾರು, ಜಗನ್ನಾಥ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಲಂಕಾರು, ಸುಂದರ ಗೌಡ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ,ದಾಮೋದರ ಗೌಡ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಲಂಕಾರು, ಧರ್ಮಪಾಲ ಅಧ್ಯಕ್ಷರು ಸಿ ಎ ಬ್ಯಾಂಕ್ ಅಲಂಕಾರು, ಮುತ್ತಪ್ಪ ಪೂಜಾರಿ ಅಧ್ಯಕ್ಷರು ಮೂರ್ತೆದಾರರ ಸಹಕಾರ ಸಂಘ ಅಲಂಕಾರು, ವಿಜಯಕುಮಾರ್ ರೈ ಮನವಳಿಕೆ ಸದಸ್ಯರು, ವಿದ್ಯಾವರ್ಧಕ ಸಂಘ ಅಲಂಕಾರು, ಶ್ರೀಲತನ್ ರೈ ವಕೀಲರು ಅಲಂಕಾರು, ಪದ್ಮಪ್ಪಗೌಡ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ ಎ ಬ್ಯಾಂಕ್ ಅಲಂಕಾರು, ನವೀನ್ ರೈ, ಪ್ರಾಂಶುಪಾಲರು ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜು ಅಲಂಕಾರು, ಹೇಮಂತ್ ರೈ ಮನವಳಿಕೆ ಉದ್ಯಮಿಗಳು ಹಾಗೂ ದುರ್ಗಂಬಾ ಆಡಳಿತ ಮಂಡಳಿ ಸದಸ್ಯರು ಅಲಂಕಾರು, ಶ್ರೀಪತಿ ರಾವ್ ಮುಖ್ಯ ಗುರುಗಳು, ಶ್ರೀ ದುರ್ಗಾಂಬ ಪ್ರೌಢಶಾಲೆ ಅಲಂಕಾರು, ಆನಂದ ಎಚ್.ಟಿ ಅಧ್ಯಕ್ಷರು ಶಿಕ್ಷಕ ರಕ್ಷಕ ಸಂಘ ಕೆಎಸ್ಎಸ್ ಕಾಲೇಜು ಸುಬ್ರಮಣ್ಯ, ರಾಷ್ಟ್ರೀಯ ಸೇವಾ ನಾಯಕರುಗಳಾದ ತರುಣ್ ಎಸ್, ಸುಪ್ರೀತ್ ಕೆ ಎಸ್, ನಮಿತಾ ಕೆ, ವೈಷ್ಣವಿ ಕೆ. ಉಪಸ್ಥಿತರಿದ್ದರು.

ಕೆ.ಎಸ್.ಎಸ್ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಚನಾಧಿಕಾರಿಗಳಾದ ಶ್ರೀಮತಿ ಆರತಿ ಕೆ. ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀಮತಿ ನಮಿತಾ ಎಂ ಎ ಧನ್ಯವಾದ ಸಮರ್ಥಿಸಿದರು. ಕುಮಾರಿ ಭಕ್ತಿಶ್ರೀ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ದುರ್ಗಾಂಬಾ ಪದವಿಪೂರ್ವ ಕಾಲೇಜು ಅಲಂಕಾರು ಇಲ್ಲಿ ದಿನಾಂಕ 27.12.2022 ರಿಂದ ದಿನಾಂಕ 2.1.2023 ರವರೆಗೆ ನೆರವೇರಲಿದೆ.

Leave a Reply

You May Have Missed

error: Content is protected !!