ಪಂಚಭೂತಗಳಲ್ಲಿ ಲೀನರಾದ ಹೀರಾಬೆನ್; ಪಿ ಎಂ ಮೋದಿ ತಾಯಿಯ ಚಿತೆಗೆ ಅಗ್ನಿ ಸ್ಪರ್ಷ

ಪಂಚಭೂತಗಳಲ್ಲಿ ಲೀನರಾದ ಹೀರಾಬೆನ್; ಪಿ ಎಂ ಮೋದಿ ತಾಯಿಯ ಚಿತೆಗೆ ಅಗ್ನಿ ಸ್ಪರ್ಷ

ಇಂದು ಬೆಳಗ್ಗೆ ನಿಧನರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಾಯಿ ಹೀರಾಬೆನ್ ಅವರ ಅಂತ್ಯಕ್ರಿಯೆ ಗಾಂಧಿನಗರದ ಸೆಕ್ಟರ್ 30 ರುದ್ರಭೂಮಿಯಲ್ಲಿ ನಡೆಯಿತು. ಪ್ರಧಾನಿ ಮೋದಿ ಅವರು ತಾಯಿಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು.
ಎರಡು ದಿನಗಳ ಹಿಂದೆ ಹೀರಾಬೆನ್ ಅನಾರೋಗ್ಯದ ಕಾರಣದಿಂದ ಅಹಮದಾಬಾದ್ ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ಇಹಲೋಕ ತ್ಯಜಿಸಿದರು.

ಪ್ರಧಾನಿ ಮೋದಿಯವರು ಮಾಹಿತಿ ತಿಳಿದ ಕೂಡಲೇ ಅಹಮದಾಬಾದ್‌ ಗೆ ಪ್ರಯಾಣಿಸಿದರು. ಅಲ್ಲಿಂದ ಗಾಂಧಿನಗರಕ್ಕೆ ತೆರಳಿದ ಅವರು ಮನೆಯಲ್ಲಿ ತಾಯಿಯ ಅಂತಿಮ ದರ್ಶನ ಪಡೆದರು.

ನಂತರ ತಾಯಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಪಿಎಂ ಮೋದಿ, ಈ ವೇಳೆ ಪಾರ್ಥೀವ ಶರೀರಕ್ಕೆ ಹೆಗಲು ನೀಡಿದರು. ಗಾಂಧಿನಗರದ ಸೆಕ್ಟರ್ 30 ರುದ್ರಭೂಮಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಯಿತು.
ಮೋದಿ ಸಹೋದರರು ಮತ್ತು ಕುಟುಂಬಸ್ಥರು ಹೀರಾಬೆನ್ ಮೋದಿ ಅವರ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡರು. ಪ್ರಧಾನಿ ಮೋದಿ ಅವರು ತಮ್ಮ ತಾಯಿಯ ಅಂತ್ಯಕ್ರಿಯೆಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿ, ಕೈಮುಗಿದು ಅಂತಿಮ ನಮನ ಸಲ್ಲಿಸಿದರು.

Previous post

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ

Next post

ನೆಲ್ಯಾಡಿ ಹಾ.ಉ.ಸಹಕಾರಿ ಸಂಘದ ವಿಸ್ತೃತ ಕಟ್ಟಡದ ಸಭಾಂಗಣ ಉದ್ಘಾಟನೆ ಮತ್ತು ಬೆಳ್ಳಿಹಬ್ಬ

Leave a Reply

You May Have Missed

error: Content is protected !!