ಕಡಬ ನ್ಯೂ ಫ್ರೆಂಡ್ಸ್ ಕ್ಲಬ್(ರಿ) ಇದರ ದಶಮಾನೋತ್ಸವದ ಪ್ರಯುಕ್ತ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಸಹಾಭಾಗಿತ್ವದಲ್ಲಿ ಸಾರ್ವಜನಕ ರಕ್ತದಾನ ಶಿಬಿರ

ಕಡಬ ನ್ಯೂ ಫ್ರೆಂಡ್ಸ್ ಕ್ಲಬ್(ರಿ) ಇದರ ದಶಮಾನೋತ್ಸವದ ಪ್ರಯುಕ್ತ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಸಹಾಭಾಗಿತ್ವದಲ್ಲಿ ಸಾರ್ವಜನಕ ರಕ್ತದಾನ ಶಿಬಿರ

ಕಡಬ: ಇಲ್ಲಿನ ಅಂಬೇಡ್ಕರ್ ಭವನದದಲ್ಲಿ ಸಾರ್ವಜನಕ ರಕ್ತದಾನ ಶಿಬಿರವು ನಡೆಯಿತು. ಸಭೆಯ ಅದ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ರವರು ವಹಿಸಿದ್ದರು. ಉದ್ಘಾಟಕರಾಗಿ ಕಡಬ ಪೊಲೀಸ್ ಉಪನಿರೀಕ್ಷಕ ರಾದ ಆಂಜೆನೇಯ ರೆಡ್ಡಿ ರವರು ಆಗಮಿಸಿ ಯುವ ಜನತೆ ಸಮಾಜಮುಖಿ ಕಾರ್ಯಕ್ರಮ ನಡೆಸುವುದು ಅಭಿನಂದನಾರ್ಹ, ಮುಂದೆಯೂ ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಕಡಬ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಚೆನ್ನಪ್ಪ ಗೌಡರು ಮಾತನಾಡಿದರು. ವೇದಿಕೆಯಲ್ಲಿ, ಜನನಿ ಹೊಸಮಠ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಕರೀಂ ಕೆ ಕೆ, ಅಲಿ ಬನಾತ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅಯ್ಯೂಬ್, ಅಶ್ರಫ್ ಶೇಡಿಗುಂಡಿ,ಹನೀಫ್ ಹಾಜಿ ಉಪಸ್ಥಿತರಿದ್ದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಯ ಜಿಲ್ಲಾ ಸಂಯೋಜಕರಾದ ಪ್ರವೀಣ್ ರವರು ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ದಾಖಲೆಯ 102 ಯುನಿಟ್ ರಕ್ತಗಳನ್ನು ಸಂಗ್ರಹಿಸಲಾಯಿತು. ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ರವರು ಸಭೆಯನ್ನು ಸ್ವಾಗತಿಸಿ, ಶಾಹಿಲ್ ರವರು ವಂದಿಸಿದರು.

Leave a Reply

You May Have Missed

error: Content is protected !!