ಮರದಿಂದ ಬಿದ್ದು ಮೃತ್ಯು

ಮರದಿಂದ ಬಿದ್ದು ಮೃತ್ಯು

ಗೋಳಿತ್ತೊಟ್ಟು:ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಗೋಳಿತ್ತೊಟ್ಟು ಗ್ರಾಮದ ಮುರಿಯೇಲು ಎಂಬಲ್ಲಿ ಫೆ.2ರಂದು ಸಂಜೆ ನಡೆದಿದೆ. ಮೃತಪಟ್ಟವರನ್ನು ಗೋಳಿತ್ತೊಟ್ಟು ಗ್ರಾಮದ ಕಿನ್ಯಡ್ಕ ನಿವಾಸಿ ಕುಡ್ಪ ಮುಗೇರ(70ವ.) ಎನ್ನಲಾಗಿದೆ. ಕುಡ್ಪ ಮುಗೇರ ಅವರು ಕೂಲಿ ಕೆಲಸ ಮಾಡುತ್ತಿದ್ದು ಫೆ.2ರಂದು ಮಧ್ಯಾಹ್ನದ ಬಳಿಕ ಮನೆ ಸಮೀಪದ ಯಾದವ ಎಂಬವರ ಮನೆಗೆ ಮರದ ಗೆಲ್ಲು ಕಡಿಯಲೆಂದು ಹೋಗಿದ್ದು ಅಲ್ಲಿ ಸಂಜೆ 4.30 ರ ವೇಳೆಗೆ ಮರ ಏರಿ ಮರದ ಗೆಲ್ಲು ಕಡಿಯುವಾಗ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಮನೆಯವರು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಡ್ಪ ಮುಗೇರ ಅವರ ಪುತ್ರ ವಿನಯ ಎಂಬವರು ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!