ಉಪ್ಪಾರಪಳಿಕೆ ಸರಕಾರಿ ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ವಿದ್ಯುತ್ ಪಂಪ್ ಸೆಟ್ ಕೊಡುಗೆ

ಉಪ್ಪಾರಪಳಿಕೆ ಸರಕಾರಿ ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ವಿದ್ಯುತ್ ಪಂಪ್ ಸೆಟ್ ಕೊಡುಗೆ

ಉಪ್ಪಾರಪಳಿಕೆ: ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಶಿಕ್ಷಕರಕ್ಷಕರ ಸಂಘ ಹಾಗೂ ಪೋಷಕರ ಸಮ್ಮುಖದಲ್ಲಿ ಇಂದು ಬೆಸ್ಟ್ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷರಾದ ರಕ್ಷಿತ್ ಶಿವರಾಂ 5 ಎಚ್ ಪಿ ಸಾಮರ್ಥ್ಯದ ವಿದ್ಯುತ್ ಪಂಪ್ ಸೆಟ್ ಅನ್ನು ಕೊಡುಗೆಯಾಗಿ ನೀಡಿದರು.

ಶಾಲೆಯ ಖಾಲಿ ಜಮೀನಿನಲ್ಲಿ ಶಾಲೆಗೆ ಆದಾಯ ತರುವ ಉದ್ದೇಶದಿಂದ ಶಾಲಾ ಶಿಕ್ಷಕ ರಕ್ಷಕ ಸಂಘದವರು ಹಾಗೂ ಊರವರ ಸಹಕಾರದಿಂದ ಅಡಿಕೆ ತೋಟ ನಿರ್ಮಾಣ ಮಾಡಲಾಗಿತ್ತು.

ನೀರಿಗೆ ಬೋರ್ ವೆಲ್ ಇದ್ದರು ಪಂಪ್ ಸೆಟ್ ನ ವ್ಯವಸ್ಥೆ ಇರಲಿಲ್ಲ, ಈ ಬಗ್ಗೆ ಶಾಲಾ ಶಿಕ್ಷಕ ರಕ್ಷಕ ಸಂಘ ಹಾಗೂ ಪೋಷಕರು ಬೆಸ್ಟ್ ಫೌಂಡೇಶನ್ ಸ್ಥಾಪಕಾಧ್ಯಕ್ಷ, ದಾನಿ ರಕ್ಷಿತ್ ಶಿವರಾಮ್ ರವರ ನಲ್ಲಿ ವಿನಂತಿಸಿದ ಮೇರೆಗೆ ಇಂದು ಸರಕಾರಿ ಶಾಲೆಯ ಬಗ್ಗೆ ಇರುವ ಕಾಳಜಿಯಿಂದ ಅವರು ತಮ್ಮ ಕಚೇರಿಯಲ್ಲಿ ಪಂಪ್ ಸೆಟ್ ಹಸ್ತಾಂತರಿಸಿದರು.
ಶಾಲಾ ಶಿಕ್ಷಕ ರಕ್ಷಕ ಸಂಘ ಪದಾಧಿಕಾರಿಗಳು ಹಾಗೂ ಪೋಷಕರು ಕೃತಜ್ಞತೆಯನ್ನು ಸಲ್ಲಿಸಿದರು.

Leave a Reply

You May Have Missed

error: Content is protected !!