ಪವರ್‌ಮ್ಯಾನ್‌ಗೆ ಜಾತಿ ನಿಂದನೆ- ಜೀವ ಬೆದರಿಕೆ: ಪ್ರಕರಣ ದಾಖಲು

ಪವರ್‌ಮ್ಯಾನ್‌ಗೆ ಜಾತಿ ನಿಂದನೆ- ಜೀವ ಬೆದರಿಕೆ: ಪ್ರಕರಣ ದಾಖಲು

ಕೊಕ್ಕಡ: ವ್ಯಕ್ತಿಯೊಬ್ಬರು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಕೊಕ್ಕಡ ಮೆಸ್ಕಾಂನ ಪವರ್‌ಮ್ಯಾನ್ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ವರದಿಯಾಗಿದೆ.

ಕೊಕ್ಕಡ ಮೆಸ್ಕಾಂನ ಶಾಖೆಯಲ್ಲಿ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಎಂಬುವವರು ಫೆ.26ರಂದು ಶಿಬಾಜೆ ಗ್ರಾಮದ ನಿರಾಣ ಎಂಬಲ್ಲಿ ಪ್ರಕಾಶ್ ಹಾಗೂ ರಾಮಣ್ಣ ಎಂಬವರ ಜೊತೆ ಹೊಸದಾಗಿ ವಿದ್ಯುತ್ ಸಂಪರ್ಕದ ಕೆಲಸವನ್ನು ಮಾಡುತ್ತಿರುವ ವೇಳೆ ಮಾಧವ ಗೌಡ ಎಂಬುವವರು ಬಂದು ಕರೆಂಟ್ ಕಂಬದ ಲೈನ್ ಗಳಿಗೆ ತಗಲುತ್ತಿರುವ ಮರವನ್ನು ಕಡಿಯುವಂತೆ ಹೇಳಿದರು. ವಿದ್ಯುತ್ ಸಂಪರ್ಕ ಮಾಡುವ ಸಮಯ ಮರದ ಗೆಲ್ಲನ್ನು ಕಡಿಯುದಾಗಿ ಪವರ್ ಮ್ಯಾನ್ ತಿಳಿಸಿದರು. ಇದನ್ನು ಕೇಳದ ಮಾಧವ ಗೌಡರು ಏಕಾಏಕಿ ಪವರ್ ಮ್ಯಾನ್‌ಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಉಮೇಶ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You May Have Missed

error: Content is protected !!