ಯೂಟ್ಯೂಬ್‌ ನೋಡಿ ಮಗುವಿಗೆ ಜನ್ಮ ಕೊಟ್ಟ ಅಪ್ರಾಪ್ತೆ: ನಂತರ ಮಾಡಿದ್ದೇನು?

ಯೂಟ್ಯೂಬ್‌ ನೋಡಿ ಮಗುವಿಗೆ ಜನ್ಮ ಕೊಟ್ಟ ಅಪ್ರಾಪ್ತೆ: ನಂತರ ಮಾಡಿದ್ದೇನು?

ಮಹಾರಾಷ್ಟ್ರ: 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಯೂಟ್ಯೂಬ್‌ ನೋಡಿ ಮಗುವಿಗೆ ಜನ್ಮ ನೀಡಿದ ಬಳಿಕ ಕತ್ತು ಹಿಸುಕಿ ಮಗುವನ್ನು ಸಾಯಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿಅಪ್ರಾಪ್ತ ಬಾಲಕಿ ಆ್ಯಕ್ಟಿವ್‌ ಆಗಿದ್ದು, ಕೆಲ ಸಮಯದ ಹಿಂದೆ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ವ್ಯಕ್ತಿ ಬಲವಂತವಾಗಿ ಬಾಲಕಿಯೊಂದಿಗೆ ದೈಹಿಕ ಸಂಪರ್ಕವನ್ನು ಹೊಂದಿದ್ದಾನೆ. ಬಾಲಕಿ ಗರ್ಭಿಣಿಯಾಗಿದ್ದಾಳೆ ಆದರೆ ಈ ವಿಚಾರವನ್ನು ಯಾರಿಗೂ ಹೇಳದೇ ಹಾಗೆಯೇ ಇದ್ದಳು.
ತನ್ನ ತಾಯಿಯ ಬಳಿ ತನಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಗರ್ಭಿಣಿಯಾಗಿರುವ ವಿಷಯವನ್ನು ಬಿಟ್ಟು ಹೇಳಿದ್ದಳು. ಮಾ.3 ರಂದು ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಏನು ಮಾಡುವುದೆನ್ನುವ ಸ್ಥಿತಿಯಲ್ಲಿದ್ದಾಕೆ ಯೂಟ್ಯೂಬ್‌ ನೋಡಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗುವಿಗೆ ಜನ್ಮ ನೀಡಿದ ವಿಚಾರ ಗೊತ್ತಾದರೆ ದೊಡ್ಡ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಆಗಷ್ಟೇ ಹುಟ್ಟಿದ ತನ್ನದೇ ಮಗುವಿನ ಕತ್ತನ್ನು ಹಿಸುಕಿ ಅದನ್ನು ಪೆಟ್ಟಿಗೆಯಲ್ಲಿ ಹಾಕಿಟ್ಟಿದ್ದಾಳೆ.
ತಾಯಿ ಮನೆಗೆ ಬಂದಾಗ ಬಾಲಕಿ ಎಲ್ಲಾ ವಿಚಾರವನ್ನು ತಾಯಿಗೆ ಹೇಳಿದ್ದಾಳೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿಚಾರ ಪೊಲೀಸರಿಗೆ ತಿಳಿದಾಗ ಬಾಲಕಿಗೆ ಪರಿಚಿತನಾದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಆರಂಭಿಸಿದ್ದಾರೆ.

Leave a Reply

You May Have Missed

error: Content is protected !!