ಅರಣ್ಯಕ್ಕೆ ಬೆಂಕಿ ಹಾಕಿದ್ದ ಓರ್ವನ ಬಂಧನ, ಇಬ್ಬರು ಪರಾರಿ

ಅರಣ್ಯಕ್ಕೆ ಬೆಂಕಿ ಹಾಕಿದ್ದ ಓರ್ವನ ಬಂಧನ, ಇಬ್ಬರು ಪರಾರಿ

ಚಿಕ್ಕಮಗಳೂರು: ಬಸವನಕೋಟೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕಿದ ಒಬ್ಬನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ.

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಸವನಕೋಟೆ ಅರಣ್ಯದಲ್ಲಿ ಕಳೆದ ಭಾನುವಾರ ರಾತ್ರಿ ಬೆಂಕಿಯ ಕಾರಣದಿಂದ ಹತ್ತಾರು ಎಕರೆ ಅರಣ್ಯ ನಾಶವಾಗಿದೆ.
ಬೆಂಕಿ ಹಾಕಿದ ಓರ್ವನ ಬಂಧಿಸಲಾಗಿದೆ. ಆತನನ್ನು ರಘು ಎಂದು ಗುರುತಿಸಲಾಗಿದೆ. ಕುಮಾರ್ ಹಾಗೂ ವೆಂಕಟೇಶ್ ಎಂಬಿಬ್ಬರು ಪರಾರಿಯಾಗಿದ್ದಾರೆ. ಬಾಳೆಹೊನ್ನೂರು ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಬಾಳೆಹೊನ್ನೂರು ಸಮೀಪದ ಖಾಂಡ್ಯದ ಕಸ್ಕೆಮನೆಯಲ್ಲಿರುವ ಮೀಸಲು ಅರಣ್ಯ ಸೇರಿ ಅಕ್ಕಪಕ್ಕದ ತೋಟಗಳಿಗೂ ಬೆಂಕಿ ಅವರಿಸಿತ್ತು. ಬೆಂಕಿ ನದಿಸಲು ತಡರಾತ್ರಿವರೆಗೂ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದರು. ನೂರಾರು ಎಕರೆ ಅರಣ್ಯ, ತೋಟ ಬೆಂಕಿಗಾಹುತಿಯಾಗಿತ್ತು.

Leave a Reply

You May Have Missed

error: Content is protected !!