ಅಕ್ರಮ ಮಧ್ಯ ಶೇಖರಣೆ- ಧರ್ಮಸ್ಥಳ ಪೊಲೀಸರಿಂದ ದಾಳಿ-ಮಧ್ಯ ವಶಕ್ಕೆ

ಅಕ್ರಮ ಮಧ್ಯ ಶೇಖರಣೆ- ಧರ್ಮಸ್ಥಳ ಪೊಲೀಸರಿಂದ ದಾಳಿ-ಮಧ್ಯ ವಶಕ್ಕೆ

ಬೆಳಾಲು: ಗ್ರಾಮದ ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮಧ್ಯವನ್ನು ಧರ್ಮಸ್ಥಳ ಪೊಲೀಸರು ವಶಪಡಿಸಿಕೊಂಡ ಘಟನೆ ಮಾ.20 ರಂದು ನಡೆದಿದೆ.

ಧರ್ಮಸ್ಥಳದ ಎಸ್ ಐ ಅನಿಲ್ ಕುಮಾರ್ ನೇತೃತ್ವದ ತಂಡ ಖಚಿತ ಮಾಹಿತಿಯ ಆಧಾರದಲ್ಲಿ ಬೆಳಾಲಿನ ಎರ್ಮಲದ ಶ್ರೀಧರ ಪೂಜಾರಿಯವರ ಶೇಂದಿ ಅಂಗಡಿಗೆ ದಾಳಿ ನಡೆಸಿದರು. ಈ ವೇಳೆ ಮಾಹಿತಿ ತಿಳಿದ ಅಂಗಡಿಯಲ್ಲಿದ್ದ ವ್ಯಕ್ತಿ ಹಿಂಬದಿ ಬಾಗಿಲಿನಿಂದ ಓಡಿ ಹೋಗಿದ್ದು, ಪೊಲೀಸರು ಅಟ್ಟಾಡಿಸಿಕೊಂಡು ಹೋದರೂ ರಬ್ಬರ್ ತೋಟಕ್ಕೆ ನುಗ್ಗಿ ಪರಾರಿಯಾಗಿದ್ದಾನೆ. ನಂತರ ಅಂಗಡಿಯನ್ನು ಜಾಲಾಡಿದ ಪೊಲೀಸರಿಗೆ ಶ್ರೀಧರ ಪೂಜಾರಿಯವರ ಅಂಗಡಿಯಲ್ಲಿ ದಾಖಲಾತಿ ಇಲ್ಲದೆ ಅಕ್ರಮವಾಗಿ ವ್ಯಾಪಾರ ಮಾಡಲೆಂದು 5.4 ಲೀಟರ್ ಮಧ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ 180 ಎಂ ಎಲ್ ನ ಮೈಸೂರ್ ಲ್ಯಾನ್ಸರ್ ನ 30 ಸ್ಯಾಚೆಟ್ ಗಳು ಕಂಡು ಬಂದಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

Previous post

ಮದುವೆಗೆ ಚಿನ್ನಾಭರಣ ಖರೀದಿಸಲು ತೆರಳುತ್ತಿದ್ದ ವೇಳೆ ಹತ್ತು ಲಕ್ಷ ರೂ ದೋಚಿದ ಅಪರಿಚಿತ ವ್ಯಕ್ತಿ

Next post

ಮಾ.24ರಂದು ಕಡಬ ತಾಲೂಕು ಪಂಚಾಯತ್ ಕಟ್ಟಡ, ಆಡಳಿತ ಸೌಧ ಕಟ್ಟಡ, ಕೊಯಿಲ ಪಶು ವೈದ್ಯಕೀಯ ಕಾಲೇಜು ಉದ್ಘಾಟನೆ- ಪೂರ್ವಭಾವಿ ಸಭೆ

Leave a Reply

You May Have Missed

error: Content is protected !!