ಮಂಗಳೂರು: ಪೊಲೀಸರಿಂದ 11 ಕೆಜಿ ಗಾಂಜಾ ಸಹಿತ ಮಾದಕ ವಸ್ತು ನಾಶ

ಮಂಗಳೂರು: ಪೊಲೀಸರಿಂದ 11 ಕೆಜಿ ಗಾಂಜಾ ಸಹಿತ ಮಾದಕ ವಸ್ತು ನಾಶ

ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಗಾಂಜಾ ಸಹಿತ ಮಾದಕ ವಸ್ತುವನ್ನು ಪೊಲೀಸ್ ಅಧಿಕಾರಿಗಳು ಶುಕ್ರವಾರ(ಮಾ 24) ರಂದು ನಾಶ ಪಡಿಸಿದ್ದಾರೆ.

ಮಾದಕ ವಸ್ತುಗಳಾದ ಗಾಂಜಾ ಒಟ್ಟು 11 ಕೆಜಿ 194 ಗ್ರಾಂ ಮತ್ತು ಎಂಡಿಎಂಎ 0.014 ಗ್ರಾಂ ಅನ್ನು ನ್ಯಾಯಾಲಯದ ಅನುಮತಿ ಪಡೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ M/s Ramky Energy and Environment Ltd ನಲ್ಲಿ ನಾಶಪಡಿಸಲಾಯಿತು.
ಪೊಲೀಸ್ ಅಧಿಕಾರಿಗಳು ಈ ವೇಳೆ ಹಾಜರಿದ್ದು, ನಾಶ ಪ್ರಕ್ರಿಯೆ ನಡೆಸಿದರು. ಈ ಪ್ರಕರಣಗಳಿಗೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Leave a Reply

You May Have Missed

error: Content is protected !!