ದಾಖಲೆ ರಹಿತ 1.50 ಲಕ್ಷ ರೂ ವಶಪಡಿಸಿಕೊಂಡ ವಿಟ್ಲ ಪೊಲೀಸರು

ದಾಖಲೆ ರಹಿತ 1.50 ಲಕ್ಷ ರೂ ವಶಪಡಿಸಿಕೊಂಡ ವಿಟ್ಲ ಪೊಲೀಸರು

ವಿಟ್ಲ: ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ದಾಖಲೆ ರಹಿತವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1.50 ಲಕ್ಷ ರೂ. ನಗದನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡ ಘಟನೆ ರವಿವಾರ ನಡೆದಿದೆ.

ಕೊಳ್ನಾಡು ಗ್ರಾಮದ ಸಾಲೆತ್ತೂರು ಕಟ್ಟೆ ನಿವಾಸಿ ಬಶೀರ್ (29) ಹಣ ಸಾಗಾಟ ಮಾಡುತ್ತಿದ್ದ ಎಂದು ಗುರುತಿಸಲಾಗಿದೆ. ಸಾಲೆತ್ತೂರು- ಬಾಕ್ರಬೈಲು ರಸ್ತೆಯ ಮೆದು ಎಂಬಲ್ಲಿ ಕರ್ನಾಟಕ ರಾಜ್ಯದ ಚುನಾವಣೆ ಪ್ರಯುಕ್ತ ತೆರದಿರುವ ಅಂತಾರಾಜ್ಯ ಚೆಕ್‌ ಪಾಯಿಂಟ್‌ ನಲ್ಲಿ ಮಾ.26 ರಂದು ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಪತ್ತೆಯಾಗಿದೆ.

ಸಾಲೆತ್ತೂರು ಕಡೆಯಿಂದ ಬಾಕ್ರಬೈಲು ಕಡೆಗೆ ಬರುತ್ತಿದ್ದ ಬಶೀರ್ ಅವರ ಕಾರನ್ನು ಪೊಲೀಸರು ನಿಲ್ಲಿಸಿ ತಪಾಸಣೆ ಮಾಡಿದಾಗ ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿ ಒಟ್ಟು ಒಂದೂವರೆ ಲಕ್ಷ ರೂ. ನಗದು ಪತ್ತೆಯಾಗಿದೆ ಎನ್ನಲಾಗಿದೆ. ಹಣದ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದೇ ಇರುವುದರಿಂದ ನಗದು ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!