ಉಪ್ಪಿನಂಗಡಿ: ಪಿಕಪ್ ಹಾಗೂ ಕಾರಿನ ಮಧ್ಯೆ ಅಪಘಾತ; ಕಾರಿನಲ್ಲಿದ್ದ ಐವರಿಗೆ ಗಾಯ

ಉಪ್ಪಿನಂಗಡಿ: ಪಿಕಪ್ ಹಾಗೂ ಕಾರಿನ ಮಧ್ಯೆ ಅಪಘಾತ; ಕಾರಿನಲ್ಲಿದ್ದ ಐವರಿಗೆ ಗಾಯ

ಉಪ್ಪಿನಂಗಡಿ: ಪಿಕಪ್ ಹಾಗೂ ಕಾರಿನ ಮಧ್ಯೆ ಅಪಘಾತ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಗಾಯಗೊಂಡ ಘಟನೆ ಕಾಂಚನ- ಪೆರಿಯಡ್ಕ ಮಾರ್ಗದ ಕುವೆಚ್ಚಾರು ಎಂಬಲ್ಲಿ ನಡೆದಿದೆ.

ಕಾಂಚನ ಕಡೆಯಿಂದ ಪೆರಿಯಡ್ಕ ಕಡೆಗೆ ಬರುತ್ತಿದ್ದ ಪಿಕಪ್ ವಾಹನ ಪೆರಿಯಡ್ಕ ಕಡೆಯಿಂದ ಕಾಂಚನ ಕಡೆಗೆ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೋಳಿತೊಟ್ಟು ಸಮೀಪದ ನೂಜೋಲು ನಿವಾಸಿ ಕಾರು ಚಾಲಕ ಇಸ್ಮಾಯಿಲ್, ಅವರ ಪತ್ನಿ ಶಹೀದಾ, ಮಕ್ಕಳಾದ ಸಹನಾ, ಸಮೀಮಾ, ಮುಹಮ್ಮದ್ ಸಿನಾನ್ ಎಂಬವರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Previous post

ಜೀವನ ಸಾಗರವನ್ನು ದಾಟಲು ಹನುಮ ಸ್ಮರಣೆ ಪೂರಕ – ಶ್ರೀ ರಾಘವೇಂದ್ರ ಆಚಾರ್ಯ

Next post

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವ್ಯಾಪ್ತಿ, ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯರಿಗೆ “ಭಜನಾ ಭಾಸ್ಕರ” ಪ್ರಶಸ್ತಿ

Leave a Reply

You May Have Missed

error: Content is protected !!