ಮೊಗ್ರು: ಮನೆಭೇಟಿ ಮತಪ್ರಚಾರ ಮಹಾಅಭಿಯಾನಕ್ಕೆ ಅಭೂತಪೂರ್ವ ಬೆಂಬಲ






ಮೊಗ್ರು: ಬೆಳ್ತಂಗಡಿ ಮಂಡಲ, ಮೊಗ್ರು ಶಕ್ತಿ ಕೇಂದ್ರ ಮುಗೇರಡ್ಕ 234ನೇ ವಾರ್ಡ್ ನ ಹಲವಾರು ಕಾರ್ಯಕರ್ತ ಬಂಧುಗಳಿಂದ ಮಹಾ ಸಂಪರ್ಕ ಅಭಿಯಾನ ಮತ್ತು ಮತಯಾಚನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಚುನಾವಣಾ ಪ್ರಭಾರಿ ಯತೀಶ್ ಅರ್ವರ್, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗೌಡ ಮುಗೇರಡ್ಕ, ಸಂಘಟನಾ ಪ್ರಮುಖ್ ಜಯಪ್ರಕಾಶ್ ಕಡಮ್ಮಾಜೆ, ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಶಕ್ತಿ ಕೇಂದ್ರದ ಪ್ರಭಾರಿ ದಿನೇಶ್ ಖಂಡಿಗ,ಮಾಜಿ ಪಂಚಾಯತ್ ಸದಸ್ಯ ಆನಂದ್ ಗೌಡ, ಬೂತ್ ಅಧ್ಯಕ್ಷರಾದ ದುಷ್ಯಂತ ಗೌಡ, ಕಾರ್ಯದರ್ಶಿ ರಮೇಶ್ ನೆಕ್ಕರಾಜೆ ಹಾಗೂ ಹಲವಾರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.














Leave a Reply