ಕಾರು ಚರಂಡಿಗೆ ಬಿದ್ದು ಪ್ರಯಾಣಿಕರಿಗೆ ಗಾಯ






ಅರಂತೋಡು: ಸುಳ್ಯದಿಂದ ಆಲೆಟ್ಟಿ ಕಡೆಗೆ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಾಗಪಟ್ಟಣದಲ್ಲಿ ಚರಂಡಿಗೆ ಬಿದ್ದ ಘಟನೆ ಸೋಮವಾರ ನಡೆದಿದೆ.

ನಾಗಪಟ್ಟಣ ತಿರುವಿನಲ್ಲಿ ಮೋರಿ ನಿರ್ಮಾಣ ಮಾಡಿದ್ದು ತಡೆಗೋಡೆ ಕಿರಿದಾಗಿದ್ದು ಕಾರು ಚಾಲಕನ ಗಮನಕ್ಕೆ ಬಾರದೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಅವರಿಬ್ಬರನ್ನು ಸ್ಥಳೀಯ ಯುವಕರು ತಕ್ಷಣ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಗಾಯಗೊಂಡವರು ಮಡಿಕೇರಿ ಮೂಲದ ಸಹೋದರ, ಸಹೋದರಿಯರಾಗಿದ್ದು, ಮಿತ್ತಡ್ಕ ರೋಟರಿ ಶಾಲೆ ಬಳಿಯ ಮನೆಯೊಂದರ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದೆ.














Leave a Reply