ಹೊಸಮೊಗ್ರು: ಅಕ್ರಮ ಮರಳು ಅಡ್ಡೆಗೆ ದಾಳಿ; ದೋಣಿ,ಹಿಟಾಚಿ ಮತ್ತು ಡ್ರಜ್ಜಿಂಗ್‌ ಯಂತ್ರ ವಶಕ್ಕೆ

ಹೊಸಮೊಗ್ರು: ಅಕ್ರಮ ಮರಳು ಅಡ್ಡೆಗೆ ದಾಳಿ; ದೋಣಿ,ಹಿಟಾಚಿ ಮತ್ತು ಡ್ರಜ್ಜಿಂಗ್‌ ಯಂತ್ರ ವಶಕ್ಕೆ

ಉಪ್ಪಿನಂಗಡಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿ ಮರಳುಗಾರಿಕೆಗೆ ಬಳಸಿದ ಎರಡು ದೋಣಿ ಹಾಗೂ ಒಂದು ಹಿಟಾಚಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆ ಬಳಿಯ ಹೊಸಮೊಗ್ರು ಎಂಬಲ್ಲಿ ನಡೆದಿದೆ.

ಹೊಸಮೊಗ್ರು ಎಂಬಲ್ಲಿ ನೇತ್ರಾವತಿ ನದಿ ದಡದಲ್ಲಿ ಡ್ರಜ್ಜಿಂಗ್‌ ಯಂತ್ರ ಬಳಸಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭ ಅಲ್ಲಿ ಅಕ್ರಮವಾಗಿ ಮರಳು ತೆಗೆಯಲು ಬಳಸುತ್ತಿದ್ದ ಎರಡು ದೋಣಿ ಹಾಗೂ ಒಂದು ಹಿಟಾಚಿ ಮತ್ತು ಡ್ರಜ್ಜಿಂಗ್‌ ಯಂತ್ರವನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply

You May Have Missed

error: Content is protected !!