ಕುಂದಾಪುರದಲ್ಲಿ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿದ್ದ ಸುಳ್ಯ ಯುವಕನ ಮೃತದೇಹ ಪತ್ತೆ

ಕುಂದಾಪುರದಲ್ಲಿ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿದ್ದ ಸುಳ್ಯ ಯುವಕನ ಮೃತದೇಹ ಪತ್ತೆ

ಕುಂದಾಪುರ: ಕುಂದಾಪುರದಲ್ಲಿ ಸುಳ್ಯದ ಐವರ್ನಾಡಿನ ಯುವಕನೊಬ್ಬ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿರುವ ಘಟನೆ ನಿನ್ನೆ ನಡೆದಿದ್ದು ಇಂದು ಬೆಳಿಗ್ಗೆ ಯುವಕನ ಮೃತದೇಹ ನದಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಅಗ್ನಿ ಶಾಮಕ ದಳದವರು ಮತ್ತು ಮುಳುಗು ತಜ್ಞರ ಸತತ ಹುಡುಕಾಟದ ಪ್ರಯತ್ನದಿಂದ ನದಿಗೆ ಇಳಿದ 300 ಮೀ ಅಂತರದಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್.ಎಂ.(21) ಮಧ್ಯಾಹ್ನ ಹೊಳೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ತೆರಳಿದಾಗ ದುರ್ಘಟನೆ ನಡೆದಿದೆ.
ಸುಹಾಸ್ ಮೂಡಬಿದ್ರೆಯ ಆಯುರ್ವೇದ ಔಷಧಿ ಕಂಪೆನಿಯೊಂದರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಎ.29 ರಂದು ಬೆಳಿಗ್ಗೆ ತನ್ನ ಮನೆಯಾದ ಐವರ್ನಾಡಿನ ಮಡ್ತಿಲದಿಂದ ಮೂಡಬಿದ್ರೆಗೆ ಬಂದಿದ್ದರು. ಅಲ್ಲಿಂದ ಸ್ನೇಹಿತರೊಂದಿಗೆ ಸೌಡ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದರು ಎಂದು ತಿಳಿದು ಬಂದಿದೆ. ಸೌಡ ಸಮೀಪದ ಹೊಳೆಯಲ್ಲಿ ನೀರಿಗಿಳಿದ ಸುಹಾಸ್ ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಘಟನೆ ಬಗ್ಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!