ಕೊಕ್ಕಡ/ನೆಲ್ಯಾಡಿ : ಕಾಡಾನೆ ದಾಳಿ ಮಾಡಿದ ಪ್ರದೇಶಗಳಿಗೆ ಭೇಟಿ ನೀಡಿದ ಉಪ ವಲಯಾರಣ್ಯಾಧಿಕಾರಿ ಹಾಗೂ ಅರಣ್ಯ ಸಿಬಂದಿಗಳು

ಕೊಕ್ಕಡ/ನೆಲ್ಯಾಡಿ : ಕಾಡಾನೆ ದಾಳಿ ಮಾಡಿದ ಪ್ರದೇಶಗಳಿಗೆ ಭೇಟಿ ನೀಡಿದ ಉಪ ವಲಯಾರಣ್ಯಾಧಿಕಾರಿ ಹಾಗೂ ಅರಣ್ಯ ಸಿಬಂದಿಗಳು

ಕೊಕ್ಕಡ : ಕಳೆದ ಕೆಲವು ದಿನಗಳಿಂದ ಪಟ್ಲಡ್ಕ, ಕಾಪಿನಬಾಗಿಲು, ಕುಂಡಡ್ಕ, ಹಾರ, ಮಾಯಿಲಕೋಟೆ ಪರಿಸರದಲ್ಲಿ ರಾತ್ರಿ ವೇಳೆ ಕೃಷಿ ತೋಟಗಳಿಗೆ ದಾಳಿ ಹಲವು ಕಡೆ ಅಪಾರ ಪ್ರಮಾಣದಲ್ಲಿ ಕೃಷಿಗೆ ಹಾನಿ ಉಂಟು ಮಾಡಿದೆ.

ಮಾಹಿತಿ ಪಡೆದ ಉಪವಲಯಾರಣ್ಯಾಧಿಕಾರಿ ಸಂದೀಪ್.ಸಿ.ಕೆ ಹಾಗೂ ಅರಣ್ಯ ಸಿಬಂದಿಗಳು ಇಂದು ಹಾನಿಗೊಂಡ ಪ್ರದೇಶಗಳಿಗೆ, ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿ, ಸರಕಾರದಿಂದ ಸಿಗುವ ಪರಿಹಾರಗಳ ಬಗ್ಗೆ ತಿಳಿಸಿ, ರೈತರಿಂದ ಅರ್ಜಿಗಳನ್ನು ಪಡೆದುಕೊಂಡರು.

ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

Leave a Reply

You May Have Missed

error: Content is protected !!