ಕಾಪು: ಅವಧಿಯ ನಂತರವೂ ಮುಂದುವರಿದ ಮತದಾನ…!!!

ಕಾಪು: ಅವಧಿಯ ನಂತರವೂ ಮುಂದುವರಿದ ಮತದಾನ…!!!

ಕಾಪು: ಕಾಪು ಮಲ್ಲಾರು ಜನರಲ್ ಶಾಲೆಯ ಸಖಿ ಮತಗಟ್ಟೆಯಲ್ಲಿ ಅವಧಿ ಮುಗಿದರೂ ಪೂರ್ಣಗೊಳ್ಳದ ಮತದಾನ 6 ಗಂಟೆಯ ನಂತರವೂ ಮತದಾನ ಮುಂದುವರಿದಿದೆ.

1442 ಮತದಾರರು ಇರುವ ಮತಗಟ್ಟೆಯಲ್ಲಿ ಬೆಳ್ಳಗ್ಗಿನಿಂದಲೂ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಸಂಜೆ 5 ಗಂಟೆಯ ನಂತರ ಮತದಾರರಿಗೆ ಟೋಕನ್ ನೀಡಿ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಮತದಾನ ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣಗೊಂಡಿದ್ದು, ಪೊಲೀಸ್ ಅಧಿಕಾರಿಗಳಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸದ್ಯ ರಾತ್ರಿಯ ವರೆಗೂ ಮತದಾನ ಪ್ರಕ್ರಿಯೆ ನಡೆಯಲಿದ್ದು ಹೆಚ್ಚುವರಿ ಮಾತದಾನ ಸಿಬ್ಬಂದಿಗಳ ನಿಯೋಜನೆಗೊಳಿಸಲಾಗಿದೆ, ನಿಧಾನಗತಿಯಲ್ಲಿ ನಡೆಯುವ ಮತದಾನ ಪ್ರಕ್ರಿಯೆಗೆ ಮತದಾರರಿಂದ ಆಕ್ರೋಶ ಕೂಡಾ ವ್ಯಕ್ತವಾಗಿದೆ.

Leave a Reply

You May Have Missed

error: Content is protected !!