ಮಂಗಳೂರು ಕದ್ರಿ ದೇಗುಲದ ಆವರಣದಲ್ಲಿ ಅನುಮಾನಸ್ಪದ ಓಡಾಟ – ಮೂವರು ವಶಕ್ಕೆ

ಮಂಗಳೂರು ಕದ್ರಿ ದೇಗುಲದ ಆವರಣದಲ್ಲಿ ಅನುಮಾನಸ್ಪದ ಓಡಾಟ – ಮೂವರು ವಶಕ್ಕೆ

ಮಂಗಳೂರು: ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಅಂಗಣಕ್ಕೆ ಗುರುವಾರ ರಾತ್ರಿ ಬೈಕ್‌ ನಲ್ಲಿ ಬಂದುದಲ್ಲದೆ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಅನ್ಯ ಕೋಮಿನ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಸೈಗೋಳಿ ನಿವಾಸಿಗಳಾದ ಹಸನ್ ಶಾಹಿನ್(19 ವ), ಉಮ್ಮರ್ ಫಾರೂಕ್(21 ವ), ಮಹಮ್ಮದ್ ಜಾಫರ್(18 ವ) ಎಂಬವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಪರಿಚಿತರ ಸಂಚಾರದ ಮಾಹಿತಿ ಪಡೆದ ಸ್ಥಳೀಯರು ದೇವಸ್ಥಾನಕ್ಕೆ ಧಾವಿಸಿ ಅವರನ್ನು ವಿಚಾರಿಸಿದ್ದು, ಅದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
ವಿಚಾರಣೆ ಸಂದರ್ಭ ಯುವಕರು ತಾವು ಅಸೈಗೋಳಿಯಿಂದ ಕಾಟಿಪಳ್ಳಕ್ಕೆ ಹೋಗುವವರಾಗಿದ್ದು, ಗೂಗಲ್‌ ಮ್ಯಾಪ್‌ ನೋಡಿಕೊಂಡು ಹೋಗುವಾಗ ದಾರಿ ತಪ್ಪಿ ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು. ದೇವಸ್ಥಾನದ ಅಂಗಣಕ್ಕೆ ಬೈಕ್‌ ತಂದಿರುವುದಲ್ಲದೆ ಚಪ್ಪಲಿ ಧರಿಸಿ ಅಡ್ಡಾಡುತ್ತಿದ್ದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬಂದಿರುವ ಉದ್ದೇಶವನ್ನು ಸ್ಪಷ್ಟಪಡಿಸುವಂತೆ ತಿಳಿಸಿದರು.

ದೇವಸ್ಥಾನದ ಆವರಣವನ್ನು ಪ್ರವೇಶಿಸಿದ ಬಗ್ಗೆ ತಿಳಿಸುವಂತೆ ಪದೇ ಪದೇ ಕೇಳಿದಾಗ, ಅವರಿಂದ ಸೂಕ್ತ ಉತ್ತರ ನೀಡದಿದ್ದಾಗ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದರು.

Leave a Reply

You May Have Missed

error: Content is protected !!