ಚಾಲಕನಿಗೆ ತಲೆ ಸುತ್ತು, ನಿಯಂತ್ರಣ ಕಳೆದುಕೊಂಡ ಬಸ್; 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿ

ಚಾಲಕನಿಗೆ ತಲೆ ಸುತ್ತು, ನಿಯಂತ್ರಣ ಕಳೆದುಕೊಂಡ ಬಸ್; 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿ

ಮಂಗಳೂರು:ಶುಕ್ರವಾರ ಸಂಜೆ ನಗರದ ಬಾವುಟ ಗುಡ್ಡೆಯ ಬಳಿ ಸರಣಿ ಅಪಘಾತ ಸಂಭವಿಸಿದ್ದು,10ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ.

ಬಾವುಟಗುಡ್ಡೆ ಕಡೆಯಿಂದ ಜ್ಯೋತಿ ವೃತ್ತದ ಕಡೆಗೆ ತೆರಳುತ್ತಿದ್ದ ಬಸ್ ಅಕ್ಕಪಕ್ಕದಲ್ಲಿದ್ದ ಕಾರು, ಬೈಕ್ ಗಳಿಗೆ ಢಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಒಂದು ಬೈಕ್ ಬಸ್ ನಡಿಗೆ ಬಿದ್ದು ಸವಾರ ಅಪಾಯದಿಂದ ಪಾರಾಗಿದ್ದಾರೆ.

ಬಸ್ ಚಾಲಕನಿಗೆ ತಲೆ ಸುತ್ತು ಬಂದು ನಿಯಂತ್ರಣ ಕಳೆದುಕೊಂಡ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

Leave a Reply

You May Have Missed

error: Content is protected !!