ಬೆಂಕಿ ಅವಘಡ: ಸುಟ್ಟು ಭಸ್ಮವಾದ ಎಟಿಎಂ ಮೆಷಿನ್‌

ಬೆಂಕಿ ಅವಘಡ: ಸುಟ್ಟು ಭಸ್ಮವಾದ ಎಟಿಎಂ ಮೆಷಿನ್‌

ಮಂಗಳೂರು: ನಗರದ ಹಂಪನಕಟ್ಟೆಯ ಬ್ಯಾಂಕ್‌ವೊಂದರ ಎಟಿಎಂನಲ್ಲಿ ಬೆಂಕಿ ಅವಘಡ ಸಂಭವಿಸಿ ನೋಟುಗಳು ಸುಟ್ಟು ಹೋಗಿವೆ.

ಶುಕ್ರವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಎಟಿಎಂ ಮೆಷಿನ್‌ ಸುಟ್ಟು ಹೋಗಿದೆ. ಛೇಂಬರ್‌ನಲ್ಲಿದ್ದ ನೋಟುಗಳಿಗೂ ಬೆಂಕಿ ತಗಲಿದೆ.
ನಷ್ಟದ ಅಂದಾಜು ಇನ್ನಷ್ಟೆ ತಿಳಿಬೇಕಿದೆ. ಪಾಂಡೇಶ್ವರ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.
ದಟ್ಟ ಹೊಗೆ ಪಕ್ಕದಲ್ಲಿರುವ ಬ್ಯಾಂಕ್‌ ಕಚೇರಿಯೊಳಗೆ ಹರಡಿದ ಪರಿಣಾಮ ಅಲ್ಲಿಯೂ ಹಾನಿಯುಂಟಾಗಿದೆ. ಬೆಂಕಿ ಅವಘಡಕ್ಕೆ ಶಾರ್ಟ್‌ ಸರ್ಕ್ನೂಟ್‌ ಕಾರಣವಾಗಿರಬಹುದು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

You May Have Missed

error: Content is protected !!