ಧರ್ಮಸ್ಥಳ: ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

ಧರ್ಮಸ್ಥಳ: ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

ಧರ್ಮಸ್ಥಳ: ಸಮೀಪದ ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಹಾಸನದ ಹರಳಹಳ್ಳಿಯ ಕೃಷ್ಣಪ್ಪ ಗೌಡ ಎಚ್.ಟಿ. (52) ಮೃತರು ಎಂದು ಗುರುತಿಸಲಾಗಿದೆ.
ತನ್ನ ಪತ್ನಿ ಮಗನೊಂದಿಗೆ ಸ್ನಾನಕ್ಕೆ ಬಂದಿದ್ದು ನದಿ ನೀರಿಗೆ ಇಳಿದಿದ್ದರು. ಈ ವೇಳೆ ಮಗನಿಗೆ ನೀರಿನಿಂದ ಮೇಲೆ ಬರಲಾಗದಿದ್ದು, ಅವರನ್ನು ಮೇಲೆಳೆದು ಅವರ ಪ್ರಾಣ ರಕ್ಷಿಸಿದ ತಂದೆ ಕೃಷ್ಣಪ್ಪ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಧರ್ಮಸ್ಥಳ ವಿಪತ್ತು ಘಟಕದವರ ಸಹಾಯದಿಂದ ಮೃತ ದೇಹವನ್ನು ನದಿಯಿಂದ ಹುಡುಕಿ ಮೇಲೆ ತರಲಾಯಿತು. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave a Reply

You May Have Missed

error: Content is protected !!